ಸಿದ್ದಾಪುರ: ಹ್ಯಾಟ್ರಿಕ್ ಹೀರೋ ಡಾ.ಶಿವರಾಜಕುಮಾರ ಹಾಗೂ ಗೀತಾ ಶಿವರಾಜಕುಮಾರ ಮಂಗಳವಾರ ಹಾರ್ಸಿಕಟ್ಟಾಕ್ಕೆ ಆಗಮಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದರು.
ಶಿವರಾಜಕುಮಾರ ದಂಪತಿಗಳು ಬರುತ್ತಾರೆ ಎಂದು ಯಾರಿಗೂ ತಿಳಿದಿರಲಿಲ್ಲ. ಮಂಗಳವಾರ ಹಾರ್ಸಿಕಟ್ಟಾದಲ್ಲಿ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಶಾಸಕ ಹಾಗೂ ಶಿವರಾಜಕುಮಾರ ಅವರ ಆಪ್ತರಾದ ಭೀಮಣ್ಣ ನಾಯ್ಕ ಹಾಗೂ ಮತ್ತಿತರರು ಕಾರ್ಯೋನ್ಮುಖರಾದಾಗ ಶಿವರಾಜಕುಮಾರ ದಂಪತಿಗಳು ಆಗಮಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಸಹಿಪ್ರಾ ಶಾಲಾ ಮಕ್ಕಳು, ಮಹಿಳೆಯರು, ಶಿವರಾಜಕುಮಾರ ಅವರ ಅಭಿಮಾನಿಗಳು ಅವರನ್ನು ಮುತ್ತಿಕೊಂಡು ಸೆಲ್ಪಿ ತೆಗೆದುಕೊಂಡು ಅವರೊಂದಿಗೆ ಮಾತುಕತೆ ನಡೆಸಿದರು. ಶಿವರಾಜಕುಮಾರ ಹಾಗೂ ಗೀತಾ ಅವರು ಎಲ್ಲರನ್ನು ಹಸನ್ಮುಖದಿಂದ ಮಾತನಾಡಿಸಿ ಸಂತಸಪಟ್ಟು ಗ್ರಾಮೀಣ ಜನತೆ ತಮ್ಮ ಮೇಲೆ ಇಟ್ಟ ವಿಶ್ವಾಸಕ್ಕೆ ಮೆಚ್ಚುಗೆವ್ಯಕ್ತಪಡಿಸಿದರು.
ಶಾಸಕ ಭೀಮಣ್ಣ ನಾಯ್ಕ, ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ, ಗ್ರಾಪಂ ಅಧ್ಯಕ್ಷೆ ಹನುಮಕ್ಕ ಭೋವಿ. ಉಪಾಧ್ಯಕ್ಷ ಸಿದ್ದಾರ್ಥ ಗೌಡರ್, ಅಶೋಕ ನಾಯ್ಕ, ಅನಂತಹೆಗಡೆ, ಶ್ರೀನಿವಾಸ ಶಾಸನಭಾಗ, ಶಾಂತ ಗೌಡರ್ ಸೇರಿದಂತೆ ನೂರಾರು ಜನರು ಸೇರಿದ್ದರು.