ಶಿರಸಿ: ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲ ಮಾಡಿಕೊಡುವ ಹಿನ್ನೆಲೆಯಲ್ಲಿ ಇಲ್ಲಿನ ಅಸ್ಮಿತೆ ಫೌಂಡೇಶನ್ ಉದ್ಯೋಗ ಮಾಹಿತಿ ಸೇವಾ ಕೇಂದ್ರವನ್ನು ಪ್ರಾರಂಭಿಸಿದ್ದು ಉದ್ಯೋಗಾವಕಾಶ ಬಯಸುವವರು ಸಂಸ್ಥೆಯ ಕಚೇರಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡು ಅವರ ವಿದ್ಯಾರ್ಹತೆ ಹಾಗೂ ಕೌಶಲ್ಯಕ್ಕೆ ತಕ್ಕ ಉದ್ಯೋಗ ಅವಕಾಶಗಳ ಮಾಹಿತಿಯನ್ನು ಪಡೆಯಬಹುದಾಗಿದೆ. ಹೆಸರು ನೋಂದಣಿ ಮಾಡಿಕೊಳ್ಳುವ ಅಭ್ಯರ್ಥಿಗಳಿಗೆ ರಾಜ್ಯಾದ್ಯಂತ ಲಭ್ಯವಿರುವ ಖಾಸಗಿ ಉದ್ಯೋಗದ ಮಾಹಿತಿಯನ್ನು ನೀಡಿ ಉತ್ತೇಜನ ನೀಡಲಾಗುತ್ತದೆ.
ಅಲ್ಲದೆ ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರದಂದು ಅಸ್ಮಿತೆ ಫೌಂಡೇಶನ್ ಕಚೇರಿಯಲ್ಲಿ ಉಚಿತವಾಗಿ ಆನ್‌ಲೈನ್ ಸಂದರ್ಶನವನ್ನು ಏರ್ಪಡಿಸಿ ಉದ್ಯೋಗ ಹೊಂದಲು ಅನುಕೂಲ ಮಾಡಿಕೊಡುವ ಯೋಜನೆಯನ್ನು ಸಂಸ್ಥೆ ಹೊಂದಿದ್ದು ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅಸ್ಮಿತೆ ಪೌಂಡೇಶನ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ರಿಯಾಜ್ ಸಾಗರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ:Tel:+9108384251823, Tel:+916361657873 ಗೆ ಸಂಪರ್ಕಿಸಬಹುದಾಗಿದೆ.