ಶಿರಸಿ: ಉತ್ತರಕನ್ನಡ ಜಿಲ್ಲಾ ಯೋಗ ಫೆಡರೇಶನ್ ಮತ್ತು ರೋಟರಿ-IMA ಯೋಗಕೇಂದ್ರ, ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಫೆ.4, ಮಂಗಳವಾರ ಬೆಳಿಗ್ಗೆ 5.30 ರಿಂದ 7.30 ರವರೆಗೆ ಶಿರಸಿಯ ನೆಮ್ಮದಿ ಆವಾರದಲ್ಲಿ ಸಾರ್ವಜನಿಕ ಸೂರ್ಯನಮಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.
“ಯೋಗ ಚಿಕಿತ್ಸೆಯಲ್ಲಿ ಸೂರ್ಯನಮಸ್ಕಾರ” ಕುರಿತಾಗಿ ಶ್ರೀಮತಿ ವಾಣಿ ಜಕ್ಕೊಳ್ಳಿ ಉಮ್ಮಚಗಿ ವಿಶೇಷ ಮಾರ್ಗದರ್ಶನ ಮಾಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿ ರಥಸಪ್ತಮಿಯ ದಿನ ಸೂರ್ಯದೇವನ ವಿಶೇಷ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸಂಘಟಕರು ಕೋರಿದ್ದಾರೆ.
ಭಾಗವಹಿಸುವವರು ಯೋಗಾ ಮ್ಯಾಟ್ ಅಥವಾ ನೆಲಹಾಸುವಿನೊಂದಿಗೆನೊಂದಿಗೆ ಬರಬೇಕು. ಯಾವುದೇ ಗ್ರೂಪ್, ಅಥವಾ ಶಾಲಾ ಕಾಲೇಜುಗಳಿಂದ ತಂಡವಾಗಿ ಭಾಗವಹಿಸುವವರು Tel:+919845329306, Tel:+919481445466 ವಾಟ್ಸಾಪ್ ನಂಬರ್ ಗೆ ಮುಂಚಿತವಾಗಿ ತಿಳಿಸಬೇಕೆಂದು ಕೋರಲಾಗಿದೆ.