ಶಿರಸಿ: ಖ್ಯಾತ ಕ್ರೀಡಾಪಟು, ಕಾಮನವೆಲ್ತ್ ಗೇಮ್ನಲ್ಲಿ ಪದಕ ವಿಜೇತರು, ಅನುಭವಿ ಕೋಚ್ ಆಗಿರುವುದಲ್ಲದೇ ಕಳೆದ 25 ವರ್ಷಗಳ ಕಾಲ ಭಾರತೀಯ ಸೈನ್ಯಕ್ಕೆ ತನ್ನ ಅಮೂಲ್ಯ ಸೇವೆಯನ್ನು ನೀಡಿರುವ ಕಾಶೀನಾಥ್ ನಾಯ್ಕ್ ಇದೀಗ ನಿವೃತ್ತಿ ಪಡೆದು ಶಿರಸಿಗೆ ಆಗಮಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಫೆ.3, ಸೋಮವಾರ ಅಪರಾಹ್ನ 3.30ಕ್ಕೆ ಶಿರಸಿಗೆ ಆಗಮಿಸುವ ಕಾಶಿನಾಥ ನಾಯ್ಕರವರನ್ನು ನೀಲೇಕಣಿ ಗಣಪತಿ ದೇವಸ್ಥಾನದ ಎದುರು ಸ್ವಾಗತಿಸಿ ಬೈಕ್ ರ್ಯಾಲಿ ಮೂಲಕ ಹಳೆ ಬಸ್ಸ್ಟ್ಯಾಂಡ್ ವೃತ್ತದವರೆಗೆ ಬಂದು ಅಲ್ಲಿ ಸನ್ಮಾನ ನೆರವೇರಿಸುವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಿರಸಿ ಜಿಲ್ಲಾ ಘಟಕ ಹಾಗೂ ಶಿರಸಿ ತಾಲೂಕಾ ದೈಹಿಕ ಶಿಕ್ಷಕರ ಸಂಘದಿಂದ ಆಯೋಜಿಸಲಾಗಿದೆ.
ಶಿರಸಿಯ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಜನಪ್ರತಿನಿಧಿಗಳು ಬೈಕ್ ರ್ಯಾಲಿ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಚಂದಗಾಣಿಸಲು ಕೋರಲಾಗಿದೆ.