ಯಲ್ಲಾಪುರ: ಕಳೆದ ವಾರ ತಾಲೂಕಿನ ಗುಳ್ಳಾಪುರ ಬಳಿ ಲಾರಿ ಪಲ್ಟಿಯಾಗಿ 10 ಜನರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಲಾರಿಯ ಚಾಲಕ ಹಾಗೂ ಮಾಲೀಕರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಲಾರಿಯ ಚಾಲಕ ಸವಣೂರಿನ ನಿಜಾಮುದ್ದೀನ ಕರೀಂ ಖಾನ್ ಸೌದಾಗರ ಹಾಗೂ ಮಾಲೀಕ ಗೌಸ್ ಮೊಹಿದ್ದೀನ್ ಬಸೀರ್ ಅಹ್ಮದ್ ಲೋಹಾರ ಬಂಧಿತರು.
ಕಳೆದ ಜನವರಿ 22 ರಂದು ಸವಣೂರಿನಿಂದ ಕುಮಟಾಕ್ಕೆ ತರಕಾರಿ ಸಾಗಿಸುತ್ತಿದ್ದ ಲಾರಿಯಲ್ಲಿ ವ್ಯಾಪಾರಸ್ಥರೂ ಪ್ರಯಾಣಿಸುತ್ತಿದ್ದು, ಲಾರಿ ಪಲ್ಟಿಯಾಗಿ 10 ಜನರು ಮೃತಪಟ್ಟಿದ್ದರು. 19 ಜನರು ಗಾಯಗೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿಯ ಚಾಲಕ ಹಾಗೂ ಮಾಲಕರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಲಾರಿ ಅಪಘಾತ ಪ್ರಕರಣ: ಚಾಲಕ, ಮಾಲೀಕನಿಗೆ ನ್ಯಾಯಾಂಗ ಬಂಧನ
![](https://euttarakannada.in/wp-content/uploads/2021/08/euk-logo-1-640x438.jpg?v=1628473623)