Slide
Slide
Slide
previous arrow
next arrow

ಫೆ.1,2ಕ್ಕೆ ಶಿರಸಿಯಲ್ಲಿ ಸಪ್ತಕ ಸಂಗೀತ ಸಂಭ್ರಮ

300x250 AD

ಶಿರಸಿ: ನಗರದಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಕಲಾವಿದರಿಂದ ಬೆಂಗಳೂರಿನ ಸಪ್ತಕ ಸಂಸ್ಥೆಯಿಂದ ಸಪ್ತಕ ಸಂಗೀತ ಸಂಭ್ರಮ ಫೆ.1 ಹಾಗೂ 2 ರಂದು ಏರ್ಪಾಟಾಗಿದೆ. ಉ.ಕ.ಜಿಲ್ಲೆಯ ಗುಣವಂತೆ ಮೂಲದ ಜಿ.ಎಸ್.ಹೆಗಡೆ ಅವರ ಸಪ್ತಕ ಸಂಸ್ಥೆಯ 600ನೇ ಕಾರ್ಯಕ್ರಮ ಶಿರಸಿಯಲ್ಲಿ ನಡೆಯಲಿದೆ. ರಾಜ್ಯ, ಹೊರ ರಾಜ್ಯಗಳಲ್ಲಿನ ಸ್ಥಳೀಯ ಹಾಗೂ ರಾಜ್ಯ, ಅಂತರಾಷ್ಟ್ರೀಯ ಮಟ್ಟದ ಕಲಾವಿದರಿಗೆ ವೇದಿಕೆ ನೀಡುತ್ತಿದ್ದು, ಸಂಗೀತ, ಯಕ್ಷಗಾನ, ನಾಟಕ ಸೇರಿದಂತೆ ಅನೇಕ ಕಲಾ ಪ್ರಕಾರದ‌ ಪ್ರಸಾರ, ಪ್ರಚಾರ, ಜಾಗೃತಿಗೆ, ಕಲಾವಿದರುಗಳಿಗೆ ಪ್ರೋತ್ಸಾಹಿಸುತ್ತ ಸಪ್ತಕ ಕೆಲಸ ಮಾಡುತ್ತಿದೆ. 600 ನೇ ಕಾರ್ಯಕ್ರಮ ಶಿರಸಿಯಲ್ಲಿ ಹಮ್ಮಿಕೊಂಡು ಎರಡು‌ ದಿನಗಳ ಸಂಗೀತ ಹಬ್ಬ ನಡೆಸುತ್ತಿದೆ.
ಈವರೆಗೆ ಕರ್ನಾಟಕದ ಎಲ್ಲ ಜಿಲ್ಲೆ, ನಗರ, ಹಳ್ಳಿಗಳ ಜೊತೆಗೆ ದೆಹಲಿ, ಮಹಾರಾಷ್ಟ್ರ, ಹೈದರಾಬಾದ್, ಗೋವಾಗಳ ಹಲವಡೆ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಈವರೆಗೆ 3000ಕ್ಕೂ ಅಧಿಕ ಕಲಾವಿದರುಗಳು ಇವರ ವೇದಿಕೆಯಲ್ಲಿ ಸಂಭ್ರಮಿಸಿದ್ದಾರೆ.
ಫೆ.1 ರಂದು ಸಂಜೆ 5.30ರಿಂದ ನಗರದ ಟಿಆರ್ ಸಿ ಸಭಾಂಗಣದಲ್ಲಿ ಶ್ರೀರಾಮ ಕಲಾ ವೇದಿಕೆಯಿಂದ ತಬಲಾ ತರಂಗ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ. ಪ್ರವೀಣ ಡಿ.ರಾವ್ ಹಾಗೂ ಕಿರಣ್ ಯಾವಗಲ್ ಅವರ ಸಂಯೋಜನೆಯ ಈ ರಿಧಂತಾರಾದ ತಬಲಾದಲ್ಲಿ ಕಿರಣ ಯಾವಗಲ್, ದೀಪಕ ದೇಸಾಯಿ, ಶ್ರೀವತ್ಸ ಕೌಲಗಿ, ಶ್ರೀಹರಿ ದಿಗ್ಗವಿ, ಯೋಗೀಶ ಭಟ್ಟ, ಸರ್ವೇಶ ಜೋಶಿ, ಪ್ರಹ್ಲಾದ ದೇಶಪಾಂಡೆ, ಗಾಯನದಲ್ಲಿ ನಯನಾ ಯಾವಗಲ್, ಕೃಷ್ಣೇಂದ್ರ ಸಮರ್ಥ, ಮಾನಸಾ ಗ್ರಾಮಪುರೋಹಿತ, ಬಾನ್ಸುರಿಯಲ್ಲಿ ಆದಿತ್ಯ ಜೋಶಿ, ಸಿತಾರದಲ್ಲಿ ಪ್ರವೀಣ ಹೂಗಾರ, ಸಂತೂರದಲ್ಲಿ ಶ್ರೀಧರ ಹೆಗಡೆ ಭಾಗವಹಿಸುವರು.
ಬಳಿಕದ ಗಾಯನ ಸಂಭ್ರಮದಲ್ಲಿ ಸಮೀಹನ್ ಕಶಾಲ್ಕರ್ ಪುಣೆ ಗಾಯನಕ್ಕೆ , ಯೋಗೀಶ ಭಟ್ಟ ಬೆಂಗಳೂರು ತಬಲಾದಲ್ಲಿ, ಭರತ್ ಹೆಗಡೆ ಹೆಬ್ಬಲಸು ಹಾರ್ಮೋನಿಯಂದಲ್ಲಿ ಸಹಕಾರ ನೀಡಲಿದ್ದಾರೆ. ವತನ‌ ಕಲಾ ಟ್ರಸ್ಟ್, ಸಿರ್ಸಿ ಸ್ಥಳೀಯ ನೆರವು‌ ನೀಡಿದೆ.
ಫೆ.2 ರಂದು‌ ನೆಮ್ಮದಿ‌ ರಂಗಧಾಮದಲ್ಲಿ ಕೋಲ್ಕತ್ತಾದ ಐಟಿಸಿ ಸಂಗೀತ ರಿಸರ್ಚ ಅಕಾಡೆಮಿ ಸಹಕಾರದಲ್ಲಿ ಸಪ್ತಕದ ೬೦೦ನೇ ಕಾರ್ಯಕ್ರಮ ನಡೆಯಲಿದೆ. ಸ್ವರಯೋಗಿ ಪಂ. ಉಲ್ಲಾಸ ಕಶಾಲ್ಕರ್ ಮತ್ತು ತಾಳಯೋಗಿ ಸುರೇಶ ತಳವಾಳ್ಕರ್ ದೀಪ ಬೆಳಗಿ ಉದ್ಘಾಟಿಸುವರು. ಬಳಿಕ ಸ್ವರ್ಣೇಂದು ಮಂಡಲ್ ಕೊಲ್ಕತ್ತಾ ಅವರಿಂದ ಸರೋಜ್ ವಾದನ, ರೂಪಕ್ ಕಲ್ಲೂರಕರ್ ಅವರಿಂದ ತಬಲಾ ವಾದನ ಹಾಗೂ ಪಂ. ಉಲ್ಲಾಸ ಕಶಾಲ್ಕರ್ ಗಾಯನಕ್ಕೆ ಪಂ.ಸುರೇಶ ತಳವಾಳ್ಕರ್ ತಬಲಾ, ಪಂ.ಗುರುಪ್ರಸಾದ ಹೆಗಡೆ ಗಿಳಿಗುಂಡಿ ಹಾರ್ಮೋನಿಯಂದಲ್ಲಿ ಸಹಕಾರ‌ ನೀಡಲಿದ್ದಾರೆ.
ಎಲ್ಲ‌ ಕಾರ್ಯಕ್ರಮಗಳು ಸಂಪೂರ್ಣ ಉಚಿತವಾಗಿದ್ದು ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.


ಕಲೆಯ‌ ಮೇಲಿನ ಪ್ರೀತಿಯೇ ಇಲ್ಲೀ ತನಕ‌ ತಂದಿದೆ. ಕಾಲೇಜು ಜೀವನದಲ್ಲಿ ಕಂಡ ಕನಸು ನನಸಾಗುತ್ತಿದೆ.

300x250 AD
  • ಜಿ.ಎಸ್.ಹೆಗಡೆ ಸಪ್ತಕ, ಬೆಂಗಳೂರು
Share This
300x250 AD
300x250 AD
300x250 AD
Back to top