ಸಿದ್ದಾಪುರ: ಕರ್ನಾಟಕ ಸರಕಾರದ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಹತ್ವದ ಯೋಜನೆಯಾದ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಉ.ಕ.ಜಿಲ್ಲಾ ಸಂಚಾಲಕರನ್ನಾಗಿ ಶಿರಸಿಯ ಪ್ರಥಮದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ.ಲೇಖಕಿ ಡಾ|ವಿಜಯಲಕ್ಷ್ಮಿ ದಾನರಡ್ಡಿ ಹಾಗೂ ಚಿತ್ತಾಕುಲ ಸರಕಾರಿ ಪ್ರೌಢಶಾಲಾ ಶಿಕ್ಷಕಿ, ಕವಿಯಿತ್ರಿ,ವಿಮರ್ಶಕಿ ಶ್ರೀದೇವಿ ಕೆರೆಮನೆಯವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಆಯ್ಕೆ ಮಾಡಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ರಜಿಸ್ಟಾರ್ ಕರಿಯಪ್ಪ ಎನ್. ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ, ಉ.ಕ.ಜಿಲ್ಲಾ ಸದಸ್ಯ ಸಂಚಾಲಕಿ ಡಾ|ಮೈತ್ರೇಯಿಣಿ ಗದಿಗೆಪ್ಪಗೌಡರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.