Slide
Slide
Slide
previous arrow
next arrow

ಜ.26ಕ್ಕೆ ನುಜ್ಜಿ ಶ್ರೀ ರಾಮಲಿಂಗ ದೇವರ ವಾರ್ಷಿಕೋತ್ಸವ

300x250 AD

ಜೋಯಿಡಾ:ತಾಲೂಕಿನ ಅಣಶಿ ಗ್ರಾಮ ಪಂಚಾಯತ ವ್ಯಾಪ್ತಿಯ ನುಜ್ಜಿ ಗ್ರಾಮದಲ್ಲಿ ಜ.26, ರವಿವಾರರಂದು ಶ್ರೀ ರಾಮಲಿಂಗ ದೇವರ ವಾರ್ಷಿಕೋತ್ಸವ ನಡೆಯಲಿದೆ.

ಈಪ ನಿಮಿತ್ತ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:30ರವರೆಗೆ ಶ್ರೀ ದೇವರ ಮಹಾಭಿಷೇಕ, ಮಧ್ಯಾಹ್ನ 12:30ರಿಂದ 2: 30ರವರೆಗೆ ಮಹಾಪೂಜೆ (ಅಲಂಕಾರ, ಆರತಿ, ತೀರ್ಥ ಪ್ರಸಾದ ವಿತರಣೆ), ಮಧ್ಯಾಹ್ನ 2:30 ರಿಂದ 3:30 ರವರೆಗೆ ಸಾತೇರಿ ದೇವಿಗೆ ಉಡಿ ತುಂಬುವುದು, ಸಂಜೆ 4:00 ರಿಂದ 6:00 ರವರೆಗೆ ಪಾಲಕಿ ವನಕ್ಕೆ ಹೋಗಿ ಬರುವುದು, ಸಂಜೆ 6:00 ರಿಂದ ರಾತ್ರಿ10:00ರವರೆಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.ರಾತ್ರಿ 10:30 ರಿಂದ 12:30 ರವರೆಗೆ ಶ್ರೀ ದೇವರ ಫಲ-ಪುಷ್ಪ, ಫಲಾವಳಿಗಳ ಸವಾಲ್ ಕಾರ್ಯಕ್ರಮ, ಅದೇ ದಿನ ರಾತ್ರಿ12:30 ಕ್ಕೆ ಭಕ್ತರ ಮನರಂಜನೆಗಾಗಿ ನುಜ್ಜಿ ಶ್ರೀರಾಮಲಿಂಗ ನಾಟ್ಯ ಸಂಘದ ಕಲಾವಿದರಿಂದ ಶ್ರೀ ವಲ್ಲಭ ಕೇಸರಕರರವರು ಬರೆದ ‘ಮಾಯೆಚಿ ಸಾಡಿ’ ಎಂಬ  ಸಂಗೀತ, ಸಾಮಾಜಿಕ, ಹೃದಯಸ್ಪರ್ಶಿ ಮರಾಠಿ ನಾಟಕ ಪ್ರದರ್ಶನ ನಡೆಯಲಿದೆ. ಭಕ್ತಾಧಿಗಳು ಈ ಎಲ್ಲ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ರಾಮಲಿಂಗ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಸಮಿತಿಯವರು ವಿನಂತಿಸಿಕೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top