ಕಾರವಾರ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಎಲ್ಲಾ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಅದೇ ರೀತಿಯಲ್ಲಿ ಫೆಬ್ರವರಿ ಮಾಹೆಯಲ್ಲಿ ನಡೆಯುವ ಛತ್ರಪತಿ ಶಿವಾಜಿ ಜಯಂತಿ ಸೇರಿದಂತೆ ವಿವಿಧ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲು ಸಲಕ ಸಿದ್ದತೆ ಮಾಡಿಕೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಫೆಬ್ರವರಿ ಮಾಹೆಯಲ್ಲಿ ನಡೆಯುವ ಛತ್ರಪತಿ ಶಿವಾಜಿ ಜಯಂತಿ ಸೇರಿದಂತೆ ವಿವಿಧ ಜಯಂತಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಫೆ. 1 ರಂದು ಮಡಿವಾಳ ಮಾಚಿದೇವ ಜಯಂತಿ, ಫೆ. 5 ರಂದು ಸವಿತಾ ಮಹರ್ಷಿ ಜಯಂತಿ, ಫೆ,10 ರಂದು ಕಾಯಕ ಶರಣರ ಜಯಂತಿ, ಫೆ. 15 ರಂದು ಶ್ರೀ ಸಂತ ಸೇವಾಲಾಲ್ ಜಯಂತಿ ಹಾಗೂ ಫೆ.20 ರಂದು ಶ್ರೀ ಸಂತ ಕವಿ ಸರ್ವಜ್ಙ ಜಯಂತಿಯನ್ನು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಿಗದಿತ ದಿನಾಂಕದAದು ಬೆಳಗ್ಗೆ 10.30 ಗಂಟೆಗೆ ಆಚರಿಸಲು ತೀರ್ಮಾನಿಸಲಾಯಿತು.
ಛತ್ರಪತಿ ಶಿವಾಜಿ ಜಯಂತಿಯನ್ನು ಸಮುದಾಯದ ಕೋರಿಕೆಯ ಪ್ರಕಾರ ಫೆ.19 ರಂದು ಬೆಳಗ್ಗೆ 10.30 ಗಂಟೆಗೆ ಕಾರವಾರ ನಗರ ಸಭೆಯ ಉದ್ಯಾವನದಲ್ಲಿ ವಿಜೃಂಭನೆಯಿಂದ ಆಚರಿಸಲು ನಿರ್ಧರಿಸಲಾಯಿತು.
ಮಹಾನ್ ದಾರ್ಶನಿಕರು ಕೇವಲ ಒಂದು ಜಾತಿ ಹಾಗೂ ಧರ್ಮಕ್ಕೆ ಸೀಮಿತವಾಗದೆ ಸಮಾಜದ ಒಳತಿಗಾಗಿ ತಮ್ಮ ಜೀವನವನ್ನೇ ತ್ಯಜಿಸಿದವರನ್ನು ಸರ್ಕಾರ ಗುರುತಿಸಿ ಜಯಂತಿಗಳನ್ನು ಆಚರಿಸಲಾಗಿದ್ದು, ಅವರ ವಿಚಾರ ಧಾರೆಗಳು, ವಚನ ಸಾಹಿತ್ಯಗಳ, ಸಾಧನೆ, ಆದರ್ಶಗಳನ್ನು ಅರಿತುಕೊಂಡು ಅವರ ಹಾಕಿಕೊಟ್ಟ ಮಾರ್ಗಗಳನ್ನು ಅನುಸರಿಸುವ ಉದ್ದೇಶದಿಂದ ಜಯಂತಿ ಆಚರಿಸುತ್ತಿಲಾಗುತ್ತಿದೆ ಈ ಎಲ್ಲಾ ಜಯಂತಿಗಳ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಎಲ್ಲಾ ಜಯಂತಿಗಳನ್ನು ಎಲ್ಲಾ ಸಮುದಾಯವರು ಒಟ್ಟುಗೂಡಿ ಜಯಂತಿಗಳನ್ನು ಆಚರಿಸಬೇಕು ಎಂದರು.
ನಿಯಮನುಸಾರ ಆಮಂತ್ರಣ ಪತ್ರಿಕೆಯನ್ನು ಪ್ರಕಟಿಸುವಂತೆ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸವನ್ನು ಏರ್ಪಡಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ಎಂ ನಾಯ್ಕ, ವಿವಿಧ ಇಲಾಖೆಯ ಅಧಿಕಾರಗಳು, ಎಲ್ಲಾ ಸಮುದಾಯದ ಮುಂಖಡರುಗಳು ಇತರರು ಉಪಸ್ಥಿತರಿದ್ದರು.