Slide
Slide
Slide
previous arrow
next arrow

ವಕ್ಫ್ ಸಂಸ್ಥೆಯ ನೂತನ ಆಡಳಿತ ಸಮಿತಿಯ ಚುನಾವಣೆ

300x250 AD

ಕಾರವಾರ: ಅಂಜುಮನ್ ಫಲಾವುಲ್ ಮುಸ್ಲೀಮೀನ್, ದಾಂಡೇಲಿ ಪಟ್ಟದ ವಕ್ಫ್ ಸಂಸ್ಥೆಯ ನೂತನ ಆಡಳಿತ ಸಮಿತಿಯ 31 ಸ್ಥಾನಗಳಿಗೆ ಒಟ್ಟು 1260 ಅರ್ಹ ಸಾಮಾನ್ಯ ಸದಸ್ಯರಿಂದ ಫೆ.16 ರಂದು ಮತದಾನ ನಡೆಯಲಿದೆ.
ಜ.28 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿ ಫೆ.3 ರವರೆಗೆ, ಬೆಳಗ್ಗೆ 11.30 ರಿಂದ ಮಧ್ಯಾಹ್ನ 4.30 ರವರೆಗೆ ಅಂಜುಮನ್ ಫಲಾವುಲ್ ಮುಸ್ಲೀಮೀನ್, ಅಂಜುಮನ್ ಕಾಂಪ್ಲೇಕ್ಸ, ಲಿಂಕ್ ರೋಡ್, ದಾಂಡೇಲಿಯಲ್ಲಿ ನಾಮಪತ್ರಗಳನ್ನು ಸ್ವಿಕರಿಸಲಾಗುವುದು ಹಾಗೂ ಫೆ.4 ರಂದು ಬೆಳಗ್ಗೆ 11.30 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಫೆ.5 ರಂದು ಬೆಳಗ್ಗೆ 11:30 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ.
ಅಂತಿಮವಾಗಿ ಫೆ.16 ರಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 4 ಗಂಟೆಯವರೆಗೆ, “ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಬಂಗೂರನಗರ” ದಾಂಡೇಲಿ ಪಟ್ಟಣದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ ಹಾಗೂ ಮತದಾನದ ನಂತರ ಮತ ಏಣಿಕೆ ಕಾರ್ಯವನ್ನು ನಡೆಸಲಾಗುವುದೆಂದು ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top