ಹೊನ್ನಾವರ: ಪಟ್ಟಣದ ಸ್ವರಶ್ರೀ ಸಂಗೀತ ಶಾಲೆಯ ವಾರ್ಷಿಕ ‘ಸ್ವರ ಸಂಭ್ರಮ’ ಸಂಗೀತ ಕಾರ್ಯಕ್ರಮವು ತಾಲೂಕಿನ ಯಲಗುಪ್ಪಾದ ಸೀತಾರಾಮ ವೇದಿಕೆಯಲ್ಲಿ ಜ.26, ರವಿವಾರದಂದು ಮಧ್ಯಾಹ್ನ 3 ಗಂಟೆಯಿಂದ ನಡೆಯಲಿದೆ.
ಸ್ವರಶ್ರೀ ಸಂಗೀತ ಶಾಲೆ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಸಂಜೆ 5.30ರಿಂದ ಆಮಂತ್ರಿತ ಕಲಾವಿದರ ಗಾಯನ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಗಾಯಕ ಸಿದ್ಧಾರ್ಥ್ ಬೆಳ್ಮಣ್ಣು, ಶ್ರೀಮತಿ ಶ್ರೀಲತಾ ಗುರುರಾಜ್, ಕು. ಬಿ.ಜಿ.ಸುಮಿತ್ ಕುಮಾರ್ ಹಡಿನಬಾಳ ತಮ್ಮ ಗಾನಸುಧೆ ಹರಿಸಲಿದ್ದಾರೆ. ನಂತರದಲ್ಲಿ ಜೊಯಿಡಾ ತಾಲೂಕಿನ ಗುಂದದ ಕು.ಸಿಂಚನಾ ದಾನಗೇರಿ ವಯೊಲಿನ್ ವಾದನ ಕಾರ್ಯಕ್ರಮ ನಡೆಸಿಕೊಡಲಿದ್ದು, ಈ ಎಲ್ಲಾ ಕಾರ್ಯಕ್ರಮಗಳಿಗೆ ತಬಲಾದಲ್ಲಿ ಗುರುರಾಜ ಆಡುಕಳ, ಅಕ್ಷಯ ಭಟ್ ಅಂಸಳ್ಳಿ, ಹಾರ್ಮೋನಿಯಂಲ್ಲಿ ಹರಿಶ್ಚಂದ್ರ ನಾಯ್ಕ, ಸತೀಶ್ ಭಟ್ ಹೆಗ್ಗಾರ್, ಯಲ್ಲಾಪುರ ಸಹಕರಿಸಲಿದ್ದಾರೆ. ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಲು ಸಂಘಟಕರು ಕೋರಿದ್ದಾರೆ.