ಹೊನ್ನಾವರ : ಇಲ್ಲಿಯ ಶರಾವತಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ರಾಜೇಶ ಸಾಳೆಹಿತ್ತಲ, ಉಪಾಧ್ಯಕ್ಷರಾಗಿ ಉಲ್ಲಾಸ ನಾಯ್ಕ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜೇಶ ಸಾಲೆಹಿತ್ತಲ್ ೫ನೇ ಸಲ ನಿರ್ದೇಶಕರಾಗಿ ಆಯ್ಕೆಯಾಗಿದ್ದು ಈ ಹಿಂದೆ ಉಪಾಧ್ಯಕ್ಷರೂ ಆಗಿದ್ದರು. ಇವರ ತಂದೆ ವಿನಾಯಕ ಸಾಲೇಹಿತ್ತಲ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಉಲ್ಲಾಸ ನಾಯ್ಕ ಎರಡನೇ ಸಲ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಸಂಘದ ಈ ಬಾರಿ ಉಳಿದ ನಿರ್ದೇಶಕರಾಗಿ ಉದಯ ಶಿವಾ ನಾಯ್ಕ, ಜನಾರ್ಧನ ಚನ್ನಪ್ಪಾ ನಾಯ್ಕ, ಮೋಹನ ಕೇಶವ ನಾಯ್ಕ, ಮಂಜುನಾಥ ರಾಮದಾಸ ನಾಯ್ಕ, ರವೀಂದ್ರ ಮಹಾಬಲೇಶ್ವರ ನಾಯ್ಕ, ಲಕ್ಷ್ಮಿನಾರಾಯಣ ಶೇಷಗಿರಿ ಸಾಳೆಹಿತ್ತಲ, ಸುಧಾಕರ ಅಣ್ಣಪ್ಪ ನಾಯ್ಕ, ರಾಜು ಮಂಜುನಾಥ ನಾಯ್ಕ, ಓಲ್ವಿನ್ ಲೂಯಿಸ್ ಡಿಸಿಲ್ವಾ, ಗೀತಾ ವಿನಾಯಕ ವಂದೂರಕರ, ಮುಕ್ತಾ ಗಣಪತಿ ನಾಯ್ಕ, ರಾಘವೇಂದ್ರ ರಾಮದಾಸ ಹೊನ್ನಾವರ ಆಯ್ಕೆಯಾಗಿದ್ದಾರೆ. ಆಯ್ಕೆ ನಂತರ ನಡೆದ ಸಮಾರಂಭದಲ್ಲಿ ಅಧ್ಯಕ್ಷ ರಾಜೇಶ ಸಾಳೆಹಿತ್ತಲ ಮಾತನಾಡಿ ನಿಕಟ ಪೂರ್ವ ಅಧ್ಯಕ್ಷ ರಾಜು ನಾಯ್ಕ ಅಧ್ಯಕ್ಷರಾಗಿದ್ದಾಗ ಶರಾವತಿ ಪತ್ತಿನ ಸಹಕಾರ ಸಂಘದ ಎರಡು ಶಾಖೆಗಳನ್ನು ಆರಂಭಿಸಲಾಗಿತ್ತು. ಈಗ ತನ್ನ ಅವಧಿಯಲ್ಲಿ ಇನ್ನೆರಡು ನೂತನ ಶಾಖೆಗಳನ್ನು ಆರಂಭಿಸುವುದಾಗಿ ತಿಳಿಸಿದರು.
ಉಪಾಧ್ಯಕ್ಷ ಉಲ್ಲಾಸ ನಾಯ್ಕ ಮಾತನಾಡಿ ಎಲ್ಲ ನಿರ್ದೇಶಕರ ಸಹಕಾರದೊಂದಿಗೆ ಸಂಘವನ್ನು ಉತ್ತಮ ರೀತಿಯಲ್ಲಿ ಅಭಿವೃದ್ದಿ ಪಥದತ್ತ ಮುನ್ನಡೆಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಎಂ.ಆರ್. ನಾಯ್ಕ, ಮಾಜಿ ಅಧ್ಯಕ್ಷ ರಾಜು ನಾಯ್ಕ ಮಾತನಾಡಿದರು. ನೂತನ ಆದ್ಯಕ್ಷ ಉಪಾಧ್ಯಕ್ಷರನ್ನು ಸಾರ್ವಜನಿಕರು ಅಭಿನಂದಿಸಿದರು. ಸಂಘದ ವ್ಯವಸ್ಥಾಪಕ ಯೋಗೀಶ ನಾಯ್ಕ ವಂದಿಸಿದರು.