Slide
Slide
Slide
previous arrow
next arrow

ಶ್ರೀರಾಮ ಭಜನಾ ಮಕ್ಕಳ ತಂಡದ ಉದ್ಘಾಟನಾ ಕಾರ್ಯಕ್ರಮ

300x250 AD

ಶಿರಸಿ: ಮಕರ ಸಂಕ್ರಾಂತಿಯ ಸಂತಸದ ದಿನದಂದು ಅಂಬಾಗಿರಿಯ ನಿವಾಸಿ ಶ್ರೀಮತಿ ಶೋಭಾ ಸುರೇಶ್ ಸಕಲಾತಿ ಇವರ ನಿವಾಸದ ಮೊದಲ ಮಹಡಿಯ ಸಭಾಂಗಣದಲ್ಲಿ ಶ್ರೀರಾಮ ಭಜನಾ ಮಕ್ಕಳ ತಂಡದ ಉದ್ಘಾಟನೆಯು ಜ್ಯೋತಿ ಬೆಳಗುವದರೊಂದಿಗೆ ಚಾಲನೆ ನೀಡಲಾಯಿತು.

ಮಕ್ಕಳು ಟಿವಿ, ಮೊಬೈಲ್‌ನಿಂದ ಆದಷ್ಟು ದೂರ ಇದ್ದು ಭಜನೆಯ ಮೂಲಕ ಉತ್ತಮ ಸಂಸ್ಕಾರ, ಸಂಸ್ಕ್ರತಿ, ಏಕಾಗ್ರತೆ, ಸಚ್ಚಾರಿತ್ರ್ಯಕ್ಕೆ ಬುನಾದಿ ಆಗಬೇಕೆಂಬುದು ಈ ಭಜನಾ ತಂಡದ ಉದ್ದೇಶವಾಗಿದೆ.

ಅಂತೆಯೇ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ರಮಾಕಾಂತ ಭಟ್, ಶ್ರೀಮತಿ ವೀಣಾ ಜೋಶಿ,ಮೋಹನ್ ಭಟ್, ಶ್ರೀಮತಿ ಪ್ರಮೀಳಾ ಪೈ, ಶ್ರೀಮತಿ ಸರಸ್ವತಿ ಕೂರ್ಸೆ, ಅಶೋಕ ನಾಯ್ಕ ಇವರುಗಳು ಇದ್ದು ಅಧ್ಯಕ್ಷ ಸ್ಥಾನವನ್ನು ಶ್ರೀಮತಿ ಶೋಭಾರವರು ವಹಿಸಿದ್ದರು ಹಾಗೂ ಸುರೇಶ್ ನಾರಾಯಣ ಸಕಲಾತಿ ಮತ್ತು ಶ್ರೀಮತಿ ಸಾವಿತ್ರಿ ನಾರಾಯಣ ಸಕಲಾತಿ ಇವರು ಮಾರ್ಗದರ್ಶಕರು ಹಾಗೂ ಪ್ರೋತ್ಸಾಹಕರಾಗಿದ್ದರು. ಅತಿಥಿಗಳೆಲ್ಲರೂ ಮಕ್ಕಳು ಭಜನೆಯನ್ನು ಕೇಂದ್ರೀಕರಿಸಿ ಉತ್ತಮ ಸಂಸ್ಕಾರ ಹಾಗೂ ಸಂಸ್ಕ್ರತಿಯನ್ನು ಬೆಳೆಸಿ ಹಾಗೂ ಬಳಸಿಕೊಳ್ಳುವುದರೊಂದಿಗೆ ಸನಾತನ ಧರ್ಮವನ್ನು ಉಳಿಸಲು ಮುಂದಾಗ ಬೇಕೆಂದು ತಿಳಿಸಿದರು ಹಾಗೂ ಭಜನಾ ಮಕ್ಕಳ ತಂಡಕ್ಕೆ ಶುಭ ಹಾರೈಸಿದರು.

300x250 AD

ಶ್ರೀಮತಿ ಶೋಭಾರವರು ಮಾತನಾಡಿ ವಿದ್ಯಾರ್ಥಿಗಳು ಭಜನೆ ಕಲಿಯುವುದರ ಮೂಲಕ ಶಿಸ್ತು ಮತ್ತು ಏಕಾಗ್ರತೆಯನ್ನು ಮೈಗೂಡಿಸಿಕೊಳ್ಳುವಂತಾಗಲಿ , ನನಗೆ ಭಜನೆಯ ಬಗ್ಗೆ ಆಸಕ್ತಿ ಹಾಗೂ ಬದುಕಿನ ಉದ್ದಕ್ಕೂ ಪ್ರತಿ ದಿನ ಭಜನೆಯನ್ನು ಹೇಳುವ ಸಂಸ್ಕಾರ ಬೇರೂರಲು‌ ನನ್ನ ಪೂರ್ವಜರೆ ಕಾರಣರಾಗಿದ್ದಾರೆ ಎಂದು ಅವರನ್ನು ಮರೆಯಲಾಗದು ಎಂದು ವ್ಯಕ್ತ ಪಡಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಭಜನೆಯನ್ನು ಕಲಿಸಿ , ಭಜನಾ ತಂಡವಾಗಿ ಸಿದ್ದಪಡಿಸಿದ ನಾರಾಯಣ, ಅವರ ಪತ್ನಿ ಶೋಭಾ ಹಾಗೂ ಇವೆಲ್ಲಕ್ಕೆ ಪ್ರೋತ್ಸಾಹ ನೀಡಿದ ಸಾವಿತ್ರಿ ಅವರುಗಳನ್ನು ಪಾಲಕರು ಅಭಿನಂದಿಸಿ ಸತ್ಕರಿಸಿಸಿದರು. ಮಕ್ಕಳಿಂದ ಭಜನೆ ಹಾಗೂ ಭಕ್ತಿಗೀತೆ ನಡೆಯಿತು.

ಸಮಾರಂಭದಲ್ಲಿ ಅಕ್ಷತಾ ಶ್ರೀನಿವಾಸ್ ಬಿಜೂರ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಶ್ರೀಮತಿ ಸಾರಿಕಾ ಪ್ರಭು ವಂದಿಸಿದರು.

Share This
300x250 AD
300x250 AD
300x250 AD
Back to top