ಹೊನ್ನಾವರ: ಹೊನ್ನಾವರ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ನಡೆಯಿತು.
ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ,ಯುವನಿಧಿ ಯೋಜನೆಗಳ ಅನುಷ್ಠಾನ ಅಧಿಕಾರಿಗಳು ತಮ್ಮತಮ್ಮ ಇಲಾಖೆಯ ಪ್ರಗತಿ ವರದಿ ಸಭೆಗೆ ತಿಳಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಣ್ಣಪ್ಪ ಎಂ. ನಾಯ್ಕ, ಮಾತನಾಡಿ ಸರಕಾರದ ಜನಪರ ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರಿಗೆ ತಲುಪಿಸಿ ಅವರು ಆರ್ಥಿಕವಾಗಿ ಬೆಳವಣಿಗೆ ಹೊಂದಲು ಹಾಗೂ ಎಲ್ಲರಂತೆ ಸಂತೋಷದಿಂದ ಜೀವನ ನಡೆಸಲು ಅನುಕೂಲವಾಗಿದೆ ಎಂದರು. ಅಧಿಕಾರಿಗಳ ಶ್ರಮಕ್ಕೆ ಅಭಿನಂದಿಸಿ ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗದಂತೆ ನಿಗಾವಹಿಸಿ ಎಂದರು. ತಾಂತ್ರಿಕ,GST, KYC ಮುಂತಾದ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿದ್ಯುತ್, ಸಾರಿಗೆ, ಆಹಾರ, ಉದ್ಯೋಗ ವಿನಿಮಯ ಇಲಾಖೆ ಅಧಿಕಾರಿಗಳ ಜೊತೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಚೇತನ್ ಕುಮಾರ್,ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರುಗಳಾದ ಕೃಷ್ಣ ಮಾರಿಮನೆ, ಮಾರುತಿ ಮೊಗೇರ್, ಹೆನ್ರಿಲಿಮಾ, ಅಭಿಷೇಕ್ ತಾಂಡೆಲ್, ವಿಭಾ ಗಾವಂಕರ, ಜೈನಾಭಿ ಶೇಖ, ಗಣಪತಿ ಗೌಡ, ಗಣಪತಿ ಹಳ್ಳೆರ್, ನಾರಾಯಣ ಭಟ್,ಗುರುರಾಜ್ ನಾಯ್ಕ, ಮಾದೇವ ಗೌಡ, ಆದರ್ಶ್ ನಾಯ್ಕ, ಜಗದೀಶ್ ನಾಯ್ಕ, ಮಂಜುನಾಥ್ ನಾಯ್ಕಇವರು ಉಪಸ್ಥಿತರಿದ್ದರು.