ಹೊನ್ನಾವರ: ಪಟ್ಟಣದ ಬಜಾರ ರಸ್ತೆಯ ಶ್ರೀರಾಮ ಮಂದಿರದ ಹಿಂಭಾಗದ ಶ್ರೀ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ವತಿಯಿಂದ ಶ್ರೀಕ್ಷೇತ್ರ ಶಬರಿಮಲೆ ಯಾತ್ರೆ ನಿಮಿತ್ತ ಮಂಡಲ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಶ್ರೀ ಅಯ್ಯಪ್ಪಸ್ವಾಮಿ ಪೂಜಾ ಕಾರ್ಯಕ್ರಮ ನಿಮಿತ್ತ ಸನ್ನಿಧಾನದ ವಿಜು ಮಹಾಲೆ ಗುರುಸ್ವಾಮಿ ಇವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿತು. ಕಲಿಯುಗದ ವರದನ ನಾಮಸ್ಮರಣೆ ಮಾಡುತ್ತಾ ಮಾಲಾಧಾರಿ ಸ್ವಾಮಿಗಳು ಭಕ್ತಿಭಾವದಿಂದ ಸ್ವಾಮಿಯೆ ಶರಣಂ ಅಯ್ಯಪ್ಪ ಎಂದು ಪೂಜೆ ಸಲ್ಲಿಸಿದರು.