ಹೊನ್ನಾವರ : ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯ? ಎನ್ನ ಕಾಲೇ ಕಂಬ, ದೇಹವೇ ದೇಗುಲ ಶಿರವೇ ಹೊನ್ನ ಕಲಶವಯ್ಯ ಎನ್ನುವ ವಚನದೊಂದಿಗೆ ಪ್ರಸ್ತುತ ವಿದ್ಯಾರ್ಥಿ ಜೀವನವಾಗಿದೆ. ಅದು ಅಮೂಲ್ಯವಾದುದ್ದು. ಅದನ್ನು ಹಾಳು ಮಾಡಿಕೊಳ್ಳದಂತೆ ಬದುಕು ಕಟ್ಟಿಕೊಳ್ಳಬೇಕು ಅದೇ ವಿಧ್ಯಾರ್ಥಿಗಳು ಪಾಲಕರಿಗೂ ಶಿಕ್ಷಕರು ನೀಡುವ ದೊಡ್ಡ ಸನ್ಮಾನ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು, ಕುಮಟಾ ಪ್ರಾಂಶುಪಾಲರಾದ ವಿಜಯಾ ಡಿ ನಾಯ್ಕ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರಭಾತನಗರ ನ್ಯೂ ಇಂಗ್ಲಿಷ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಕೀಲ ನಾಗರಾಜ ವಿ.ಕಾಮತ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ವೇಳೆ ಶಾಲಾ ಮುಖ್ಯೋಪಾದ್ಯಾಪಕಿ ಕಮಲಾ ನಾಯ್ಕ, ಆಡಳಿತ ಮಂಡಳಿಯ ಉದಯ ಪ್ರಭು, ಗಣಪತಿ ಕಾಮತ, ಸದಸ್ಯರು, ಉಪಸ್ಥಿತರಿದ್ದರು. ನಂತರದಲ್ಲಿ ಪ್ರಶಸ್ತಿ ವಿತರಣೆ, ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.