ಸಿದ್ದಾಪುರ: ಕ್ರೀಡೆಗಳು ಮನುಷ್ಯನ ಚಟುವಟಿಕೆಗಳನ್ನು ಕ್ರೀಯಾಶೀಲವಾಗಿಡುತ್ತದೆ. ಸಾರ್ವಜನಿಕ ಜೀವನದಲ್ಲಿರುವ ನೌಕರ ವೃಂದದವರು ಪರಸ್ಪರ ವಿವಿಧ ಇಲಾಖೆಗಳೊಂದಿಗೆ ಬೆರೆಯಲು, ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಸಿದ್ದಾಪುರ ಜೆಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಭರತ್‌ಚಂದ್ರ ಹೇಳಿದರು.
ತಾಲೂಕಿನ ಕಡಕೇರಿ ಶಾಲಾ ಮೈದಾನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮಾಧ್ಯಮ ಪ್ರತಿನಿಧಿಗಳ ಸಂಘ ಸಿದ್ದಾಪುರ ಹಾಗೂ ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಶನಿವಾರ ಮಾತನಾಡಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ತಹಸೀಲ್ದಾರ ಎಂ.ಆರ್. ಕುಲಕರ್ಣಿ, ನಾನು ಬೇರೆ ಬೇರೆ ತಾಲೂಕಿನಲ್ಲಿ ಕೆಲಸಮಾಡಿದ್ದೇನೆ. ಆದರೆ ಸಿದ್ದಾಪುರ ತಾಲೂಕಿನಂತಹ ಪತ್ರಕರ್ತರು ಸಿಗಲಿಲ್ಲ. ಪತ್ರಕರ್ತರೇ ಪಂದ್ಯಾವಳಿಯನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ. ಪತ್ರಕರ್ತರು ಎಲ್ಲ ಇಲಾಖೆಯವರನ್ನು ಸಮನ್ವಯಗೊಳಿಸಿ ಯಾವುದೇ ಅಪೇಕ್ಷೆ ಇಲ್ಲದೇ ಉತ್ಸಾಹದಿಂದ ಕ್ರೀಡಾಕೂಟ ನಡೆಸುತ್ತಿರುವುದು ಶ್ಲಾಘನೀಯವಾಗಿದ ಎಂದು ಹೇಳಿದರು.
ಹೆಸ್ಕಾಂ ಇಂಜಿನಿಯರ್ ನಾಗರಾಜ್ ಪಾಟೀಲ್, ಬಿಇಒ ಎಂ.ಎಚ್.ನಾಯ್ಕ, ಕ್ಯಾದಗಿ ವಲಯ ಅರಣ್ಯಾಧಿಕಾರಿ ಮಹೇಶ ದೇವಾಡಿಗ, ಸಿಪಿಐ ಸೀತಾರಾಮ, ಹೆಸ್ಕಾಂನ ರವಿ ನಾಯ್ಕ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ.ನಾಯ್ಕ, ಬೇಡ್ಕಣಿ ಗ್ರಾಪಂ ಸದಸ್ಯ ಕೃಷ್ಣಮೂರ್ತಿ ಕಡಕೇರಿ, ಮಾಧ್ಯಮ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಕನ್ನೇಶ ಕೋಲಸಿರ್ಸಿ, ಉಪಾಧ್ಯಕ್ಷ ನಾಗರಾಜ ಮಾಳ್ಕೋಡು ಇತರರಿದ್ದರು.
ನೇತ್ರಾ ನಾಗರಾಜ್ ಪಾಟೀಲ್ ಪ್ರಾರ್ಥನೆ ಹಾಡಿದರು, ತಾಲೂಕು ಪತ್ರಕರ್ತರ ಸಂಘಧ ಅಧ್ಯಕ್ಷ ಗಂಗಾಧರ ಕೊಳಗಿ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಸುರೇಶ ಕಡಕೇರಿ ಸ್ವಾಗತಿಸಿದರು. ಪತ್ರಕರ್ತ ಸುಜಯ್ ಭಟ್ಟ ವಂದಿಸಿದರು. ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ಕಾರ್ಯಮ ನಿರ್ವಹಿಸಿದರು.