ಶಿರಸಿ: ನಗರದ ಯೋಗಮಂದಿರದಲ್ಲಿ ಭಗವಾನ್ ಶ್ರೀಧರ ಸಂಗೀತ ವಿದ್ಯಾಲಯದ 5 ನೇ ವರ್ಷದ ಸಂಗೀತ ನಾದೋಪಾಸನೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು. ಬೆಳಿಗ್ಗೆ ದೀಪ ಪ್ರಜ್ವಲಿಸಿ ವಿದ್ಯಾಲಯದ ಅಧ್ಯಕ್ಷರಾದ ಶಾಂತಾರಾಮ್ ಹೆಗಡೆ ದಂಪತಿಗಳು ಇವರು ಕಾರ್ಯಕ್ರಮ ಉದ್ಘಾಟಿಸುತ್ತಾ ಸಂಗೀತ ಕಲೆ ಸದಾ ಹಾಡುವವರ ಮನಸ್ಸಿಗೆ ಜನಮಾನಸಕ್ಕೆ ಮುದ ನೀಡುವ ಕಲೆ ಪರಿಶ್ರಮದಿಂದ ಸಾಧನೆಯತ್ತ ಹೆಜ್ಜೆ ಇಡಿ ಎಂದು ನುಡಿದರು. ವೇದಿಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಶ್ವೇತಾ ಹೆಬ್ಬಾರ್ ದಂಪತಿಗಳು, ಮಂಜುನಾಥ ಹೆಗಡೆ ಕುಂಟೆಮನೆ, ಮಂಜುನಾಥ್ ಮೋಟಿನ್ಸರ್, ರಾಜೇಶ್ವರಿ ಹೆಗಡೆ ಉಪಸ್ಥಿತರಿದ್ದರು. ನಂತರ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳೆಲ್ಲರು ವಿವಿಧ ರಾಗಗಳಲ್ಲಿ ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ಸಂಜೆ 6 ಗಂಟೆಯಿಂದ ವಿದ್ಯಾಲಯದ ಪ್ರಾಚಾರ್ಯೆ ವಿದುಷಿ ಸ್ಮಿತಾ ಕುಂಟೆಮನೆ ಮಾರುಬಿಹಾಗ್ ರಾಗದೊಂದಿಗೆ ಗಾಯನ ಆರಂಭಿಸಿ ನಂತರ ಭಕ್ತಿಗೀತೆಯನ್ನೂ ಸುಮಧುರವಾಗಿ ಪ್ರಸ್ತುತಿಗೊಳಿಸಿದರು. ರಾತ್ರಿ 7 ರಿಂದ 9 ಗಂಟೆ ವರೆಗೆ ಆಮಂತ್ರಿತ ಸಂಗೀತ ಕಲಾವಿಧರಾದ ಪಂಡಿತ ಶ್ರೀಪಾದ ಹೆಗಡೆ ಕಂಪ್ಲಿ, ಹೇಮಂತ ರಾಗದಿಂದ ಕಛೇರಿ ಆರಂಬಿಸಿ, ಭಕ್ತಿಗೀತೆ ಭಾವಗೀತೆಗಳನ್ನು ಸಹ ಅತ್ಯಂತ ಸುಮಧುರವಾಗಿ ಹಾಡಿಸಂಗೀತಾಸಕ್ತರ ಮನ ರಂಜಿಸಿದರು. ಆರಂಭದಲ್ಲಿ ಸಂಗೀತ ಶಿಕ್ಷಕಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉದ್ಘಾಟನಾ ಕಾರ್ಯಕ್ರಮದ ನಿರ್ವಹಣೆ ಶಿಕ್ಷಕಿ ಸುನಯನ ಹೆಗಡೆ, ನಡೆಸಿದರೆ ರಾಜೇಶ್ವರಿ ಹೆಗಡೆ ಕಲಾವಿಧರನ್ನು ಪರಿಚಯಿಸಿದರು. ಕೊನೆಯಲ್ಲಿ ಜಾನಕಿ ಹೆಗಡೆ ವಂದಿಸಿದರು. ವಿದ್ಯಾರ್ಥಿಗಳು, ಪಾಲಕರು ಅನೇಕ ಗಣ್ಯ ಸಂಗೀತಗಾರರು ಉಪಸ್ಥಿತಿ ನೀಡಿ ಕಾರ್ಯಕ್ರಮದ ಮೆರಗು ಹೆಚ್ಚಿಸಿದರು.