ಶಿರಸಿ: ಶಿರಸಿ 220/11 ಕೆ.ವಿ ಎಸಳೆ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ.10, ಶುಕ್ರವಾರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಘಂಟೆವರೆಗೆ ಎಸಳೆ ಉಪಕೇಂದ್ರ, ಗ್ರಾಮೀಣ-1 ಶಾಖೆಯ ಮಾರ್ಗಗಳಾದ ಇಸಳೂರು, ದಾಸನಕೊಪ್ಪ, ಬಂಕನಾಳ, ಬನವಾಸಿ ಶಾಖಾ ವ್ಯಾಪ್ತಿಯ ಬಚಗಾಂವ, ಭಾಶಿ, ಅಂಡಗಿ ಹಾಗೂ ತಿಗಣಿ ಪಟ್ಟಣ ಶಾಖಾ ವ್ಯಾಪ್ತಿಯ ಕೆ.ಎಚ್.ಬಿ ಕಾಲೋನಿ, ಲಂಡಕನಹಳ್ಳಿ, ವಿವೇಕಾನಂದ ನಗರ, ಕಸ್ತೂರಬಾನಗರ ಹಾಗೂ ಫಾರೆಸ್ಟ ಕಾಲೋನಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.