ಕಾರವಾರ: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕಾರ ಜಿಲ್ಲೆಯಲ್ಲಿ 6,10,262 ಪುರುಷ, 6,11,769 ಮಹಿಳೆ ಮತ್ತು 5 ಇತರೆ ಮತದಾರರು ಸೇರಿದಂತೆ ಒಟ್ಟು 12,22,036 ಮತದಾರರು ಜಿಲ್ಲೆಯಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ತಿಳಿಸಿದ್ದಾರೆ.
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025 ರಲ್ಲಿ 7942 ಯುವ ಮತದಾರರು ಮತದಾರರ ಪಟ್ಟಿಗೆ ನೊಂದಣಿಯಾಗಿದ್ದು, ಮರಣ ಮತ್ತು ಇತರೆ ಕಾರಣಗಳಿಂದ 6237 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ 92851 ಪುರುಷರು, 92,858 ಮಹಿಳೆ ಮತ್ತು 1 ಇತರೆ ಮತದಾರರು ಸೇರಿದಂತೆ ಒಟ್ಟು 1,85,710, ಕಾರವಾರದಲ್ಲಿ 1,09,921 ಪುರುಷರು,1,13,898 ಮಹಿಳೆಯರು ಸೇರಿದಂತೆ 2,23,819 ಮತದಾರರು, ಕುಮಟಾ ದಲ್ಲಿ 95,232 ಪುರುಷರು, 96,090 ಮಹಿಳೆಯರು 3 ಇತರರು ಸೇರಿದಂತೆ 1,91,325 ಮತದಾರರು, ಭಟ್ಕಳದಲ್ಲಿ 1,15,511 ಪುರುಷರು, 1,13,024 ಮಹಿಳೆಯರು ಸೇರಿದಂತೆ 2.28.535 ಮತದಾರರು,ಶಿರಸಿಯಲ್ಲಿ 1,02,510 ಪುರುಷರು ,1,02,629 ಮಹಿಳೆಯರು 1 ಇತರರು ಸೇರಿದಂತೆ 2,05,140 ಮತದಾರರು, ಯಲ್ಲಾಪುರದಲ್ಲಿ 94.237 ಪುರುಷರು, 93,270 ಮಹಿಳೆಯರು ಸೇರಿದಂತೆ ಒಟ್ಟು 1,87,507 ಮತದಾರರಿದ್ದಾರೆ.
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ಕ್ಕೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯನ್ನು ಜನವರಿ 6 ರಂದು ಜಿಲ್ಲೆಯ ಎಲ್ಲಾ ಸಹಾಯಕ ಆಯುಕ್ತರ ಕಚೇರಿಯಲ್ಲಿ , ತಹಸೀಲ್ದಾರರ ಕಚೇರಿಯಲ್ಲಿ ಮತ್ತು ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಪ್ರಚುರಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.