ಶಿರಸಿ: ಸಾಧಕರಿಗೆ ಸನ್ಮಾನ ಮಾಡುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಆದರೆ ಇಂದು ಸನ್ಮಾನಗಳು ಮಾರುಕಟ್ಟೆಯಲ್ಲಿ ಮಾರಾಟವಾಗುವ ವಸ್ತುವಿನಂತೆ ಬಹಳ ಅಗ್ಗವಾಗತೊಡಗಿದೆ. ಜೀವಮಾನದ ಸಾಧನೆಯನ್ನು ಗುರುತಿಸಿ ಸನ್ಮಾನಿಸುತ್ತಿರುವ ಈ ಸಂದರ್ಭ ಬಹಳ ಮಹತ್ವದ್ದು ಎಂದು ತೇಲಂಗ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಎಸ್.ಎಸ್. ಭಟ್ ಹೇಳಿದರು.
ಅವರು 1996 ನೇ ಸಾಲಿನ ವಿದ್ಯಾರ್ಥಿ ವೃಂದದವರು ಏರ್ಪಡಿಸಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ನನಗೆ ಇವತ್ತು ಅತೀವ ಸಂತಸವಾಗಿದೆ. ಶಿಷ್ಯರು ಗುರುವನ್ನು ಮೀರಿಸಬೇಕು ಆಗಲೇ ಗುರುವಿಗೆ ಗೌರವ ನೀವು ಇವತ್ತು ಸನ್ಮಾನಿಸಿ ಪುರಸ್ಕರಿಸಿದ್ದೀರಿ ನನಗೆ ಇದು ಹೆಮ್ಮೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯರಾದ ದೇವ್ ಮಾಸ್ತರ್ ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಂ.ವಿ. ಹೆಗಡೆ, ಪಿ.ವಿ. ಹೆಗಡೆ. ಎನ್. ವಿ. ಹೆಗಡೆ, ರಾಜೇಶ್ವರಿ ಬಡ್ತಿ, ಶರಾವತಿ ಭಟ್, ಅಮೃತ ಬೀಳಗಿ, ಎಸ್. ಆರ್. ಹೆಬ್ಳೇ, ಕೃಷ್ಣ ಅಂಕೋಲೆಕರ್, ಗಿರೀಶ್ ಎಸ್. ಹೆಗಡೆ, ಸುಮ ಜಿ. ಹೆಗಡೆ
ಮೊದಲಾದವರನ್ನು ಸನ್ಮಾನಿಸಲಾಯಿತು. ಕವಯತ್ರಿ ಎನ್. ಆರ್ . ರೂಪಶ್ರೀ ಕಾರ್ಯಕ್ರಮ ನಿರ್ವಹಿಸಿದರು . ಸುಷ್ಮಾ ಹೆಗಡೆ ಪ್ರಾರ್ಥಿಸಿದರು. ಮಧುಕರ ಶೆಟ್ಟಿ ಸ್ವಾಗತಿಸಿದರು. ರೋಚನ್ ಹೆಗಡೆ, ಮಂಜು ಗುಡಿಗಾರ್, ನಿರಂಜನ್ ಉಪಾಧ್ಯಾಯ, ರಾಘವೇಂದ್ರ ನಾಯ್ಕ್, ಚಂದ್ರು, ಮಹೇಶ್ ಶೆಟ್ಟಿ, ಭಾರತೀ, ಬಸವರಾಜ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.