ಸಿದ್ದಾಪುರ : ಅಂಧರ ಬದುಕಿಗೆ ಹಾಗೂ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಬ್ರೈಲ್ ಲಿಪಿ ಸಹಕಾರಿಯಾಗಿದೆ. ಎಲ್ಲ ಜನಸಾಮಾನ್ಯರ ಜತೆ ಕೂಡಿಕೊಂಡು ಬಾಳಲು ಸರಿಯಾದ ಶಿಕ್ಷಣ ಹೊಂದಲು ಅವರಿಗೊಂದು ಲಿಪಿ ಅಗತ್ಯ. ಅದನ್ನು ಲಯನ್ ಬ್ರೈಲ್ 12 ಚುಕ್ಕೆಯಿಂದ 6 ಚುಕ್ಕಿಗೆ ಇಳಿಸಿ ಲಿಪಿಯನ್ನು ಕಂಡುಹಿಡಿದು ಅಮರನಾದ ಲೂಯಿಬ್ರೈಲ್ ಜನ್ಮ ಸಾರ್ಥಕ ಎಂದು ಡಾ. ರವಿ ಹೆಗಡೆ ಹೂವಿನಮನೆ ಹೇಳಿದರು.
ಅವರು ಆಶಾಕಿರಣ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಲೂಯಿ ಬ್ರೈಲ್ ಜನ್ಮದಿನವನ್ನು ಆಚರಿಸಿ, ಅದರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಆಶಾಕಿರಣ ಟ್ರಸ್ಟ್‌ನ ಟ್ರಸ್ಟೀ ಜಿ. ಜಿ. ಹೆಗಡೆ ಬಾಳಗೋಡ ಅವರು ಮಾತನಾಡಿ ಜಗತ್ತಿನಾದ್ಯಂತ ಯಾವುದೇ ಲಿಪಿಯನ್ನು ಕಲಿತು ಶಿಕ್ಷಣಕ್ಕೆ ಬಳಸಲು ಬ್ರೈಲ್ ಲಿಪಿ ಸಹಾಯಕವಾಗಿದೆ. ಜಗತ್ತಿನಲ್ಲಿ ತಮ್ಮ ಬದುಕನ್ನು ನಿರ್ವಹಿಸಲು, ಉದ್ಯೋಗ ಹೊಂದಲು ಸಹಾಯಕವಾಗಿದೆ. ಸಮಾಜದ ಮುಖ್ಯವಾಹಿನಿಗೆ ಸೇರಲು ಹೆಚ್ಚು ಪ್ರಯೋಜನ ಸಾಧ್ಯ ಎಂದು ಹೇಳಿದರು.
ಇನ್ನೋರ್ವ ಟ್ರಸ್ಟೀ ಶ್ರೀಧರ ಭಟ್ಟ ಅಗ್ಗೆರೆ ಅವರು ಮಾತನಾಡಿ ಸಿದ್ದಾಪುರದಲ್ಲಿನ ಅಂಧರ ಶಾಲೆ ಅನೇಕ ಮಕ್ಕಳ ವಿದ್ಯಾಭ್ಯಾಸಕ್ಕೆ ಉಪಯುಕ್ತ. ಅಲ್ಲದೇ ಕೆಲವರು ಕಲಿತು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇವೆಲ್ಲದಕ್ಕೆ ಲೂಯಿ ಬ್ರೈಲ್ ಕಂಡುಹಿಡಿದ ಬ್ರೈಲ್ ಲಿಪಿಯೇ ಸಹಕಾರಿ ಎಂದು ಹೇಳಿದರು. ಮುಖ್ಯಶಿಕ್ಷಕಿ ಲತಾ ಮಡಿವಾಳ ಉಪಸ್ಥಿತರಿದ್ದರು.
ಅಂಧರ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಕುಮಾರಿ ಲಿಜ್ಜತ್ ಸ್ವಾಗತಿಸಿದರು. ಪ್ರಕಾಶ ವಂದಿಸಿದರು. ಕಮಲಾಕ್ಷಿ ನಾಯ್ಕ ನಿರೂಪಿಸಿದರು.