ಸಿದ್ದಾಪುರ:
ತಾಲೂಕಿನ ಕೋಡ್ಸರ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ ಗಣಪತಿ ಸುಬ್ರಾಯ ಹೆಗಡೆ ಕಂಚೀಕೈ ಹಾಗೂ ಉಪಾಧ್ಯಕ್ಷರಾಗಿ ಮಹೇಶ ಗಣೇಶ ಭಟ್ಟ ಯಲೂಗಾರ ಇವರು ಶನಿವಾರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಈ ಸಂದರ್ಭದಲ್ಲಿ ಆಡಳಿತ ಮಂಡಳಿಗೆ ಆಯ್ಕೆ ಆದ ಎಲ್ಲ ನಿರ್ದೇಶಕರುಗಳು ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾಗಿ ಸುನೀಲ್ ತೇಲಕರ್ ಕಾರ್ಯನಿರ್ವಹಿಸಿದ್ದರು.