Slide
Slide
Slide
previous arrow
next arrow

ಮಂಕಿ ಪ.ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ: ಕ್ರಮಕ್ಕೆ ಆಗ್ರಹ

300x250 AD

ಹೊನ್ನಾವರ : ತಾಲ್ಲೂಕಿನ ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಕುಡಿಯುವ ನೀರಿಲ್ಲದೆ ಸಮಸ್ಯೆ ಎದುರಾಗಿದೆ. ನೀರಿನ ಬವಣೆ ಬಗೆಹರಿಸಿ ಕೊಡಿ ಎಂದು ಮಂಕಿಯ ನಾಗರಿಕರು ಮನವಿ ಮಾಡಿಕೊಂಡಿದ್ದಾರೆ.

ಮಂಕಿ ಈ ಮೊದಲು ನಾಲ್ಕು ಗ್ರಾಮ ಪಂಚಾಯತ ಹೊಂದಿತ್ತು. ಅದರಲ್ಲಿ ಹಳೇಮಠ ಗ್ರಾ.ಪಂ. ಮೂರು ಬಾರಿ ಗಾಂಧಿ ಪುರಸ್ಕಾರ ಪ್ರಶಸ್ತಿ ಪಡೆದಿತ್ತು. ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಜನರಿಗೆ ಕುಡಿಯುವ ನೀರನ್ನು ನಲ್ಲಿಯ ಮುಖಾಂತರ ಸರಬರಾಜು ಮಾಡಿ ಜನರಿಗೆ ಸಮಸ್ಯೆ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದರು.

ಮಂಕಿಯ ಕೆಲವೆಡೆ ಅಕ್ಟೋಬರ್ ತಿಂಗಳ ನಂತರ ಬಾವಿಗೆ ಉಪ್ಪು ನೀರು ಬರುತ್ತದೆ. ಇನ್ನೂ ಕೆಲವು ಕಡೆ ನವಂಬರ್ ನಂತರ ನೀರಿನ ಬವಣೆ ಆರಂಭವಾಗುತ್ತದೆ. ಹೀಗಾಗಿ ಗ್ರಾ. ಪಂ. ವ್ಯವಸ್ಥೆ ಇದ್ದಾಗ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಮೊದಲೇ ನೀರಿನ ಸರಬರಾಜು ಮಾಡುತ್ತಿತ್ತು. 

ಪಟ್ಟಣ ಪಂಚಾಯತ ಆದರೆ ಜನರಿಗೆ 24 ಗಂಟೆ ನೀರು ಸಿಗುತ್ತದೆ, ರಸ್ತೆಯ ಬೀದಿ ದೀಪಗಳು ಗಲ್ಲಿ ಗಲ್ಲಿಗಳಲ್ಲಿ ಬೆಳಗುತ್ತದೆ ಎಂಬ ಕನಸ್ಸನ್ನು ಕಂಡ ಜನರಿಗೆ ಭ್ರಮನಿರಸನವಾಗಿದೆ. ಪಟ್ಟಣ ಪಂಚಾಯತ ಆಗಿ ಮೂರರಿಂದ ನಾಲ್ಕು ವರ್ಷ ಕಳೆದಿದೆ. ಚುನಾವಣೆ ಕೂಡ ನಡೆಯದೆ, ಸಿಬ್ಬಂದಿಗಳೆ ನಿರ್ವಹಣೆ ಮಾಡುತ್ತಿದ್ದಾರೆ. ಹಾಗಾಗಿ ದೂರದ್ರಷ್ಟಿ ಇಲ್ಲದ ಅಧಿಕಾರಿಗಳಿಗೆ ಜನರ ಕಷ್ಟ ಕಣ್ಣಿಗೆ ಕಾಣುತ್ತಾ ಇಲ್ಲ. 

300x250 AD

ಈಗಾಗಲೆ ಸ್ಥಳೀಯರು ಹಲವಾರು ಬಾರಿ ಪಟ್ಟಣ ಪಂಚಾಯತ ಅಧಿಕಾರಿಗಳಿಗೆ ನೀರಿನ ಸಮಸ್ಯೆ ಬಗ್ಗೆ ಹೇಳಿದರೆ ಅನುದಾನ ಇಲ್ಲ, ನಲ್ಲಿ ಇಲ್ಲ, ಸಿಬ್ಬಂದಿಗಳ ಕೊರತೆ ಅನ್ನುವ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಜನವರಿ ಆರಂಭ ಆದರೂ ಸಹ ಅಧಿಕಾರಿಗಳು ಎಚ್ಚತ್ತುಕೊಳ್ಳುತ್ತಿಲ್ಲ. ಇದರ ಪರಿಣಾಮ ಜನರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. 

ಕಳೆದ ವರ್ಷ ಇದೆ ಪರಿಸ್ಥಿತಿ ಉಂಟಾಗಿ, ಜಿಲ್ಲಾಧಿಕಾರಿಗಳು ಆದೇಶ ಮಾಡಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಹೀಗೆ ಮುಂದುವರಿದಲ್ಲಿ ಮಹಿಳೆಯರು ಖಾಲಿ ಕೊಡದೊಂದಿಗೆ ಪಟ್ಟಣ ಪಂಚಾಯಿತಿ ಮುತ್ತಿಗೆ ಹಾಕುವುದೊಂದು ಬಾಕಿ ಇದೆ. ಸಚಿವರು ಮತ್ತು ಜಿಲ್ಲಾಧಿಕಾರಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿ ಮಂಕಿಯ ಜನರ ಸಮಸ್ಯೆಯನ್ನು ಪರಿಹರಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

Share This
300x250 AD
300x250 AD
300x250 AD
Back to top