ಹೊನ್ನಾವರ : ತಾಲೂಕಿನ ಗುಣವಂತೆಯ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿರುವ ಚರಂಡಿಯು ರಸ್ತೆ ಅಗಲೀಕರಣದ ವೇಳೆ ಸಂಪೂರ್ಣ ನಾಶವಾಗಿದ್ದು, ಸುವ್ಯವಸ್ಥಿತವಾದ ಯಾವುದೇ ಚರಂಡಿಯನ್ನು ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದಿಂದ ಗುತ್ತಿಗೆ ಪಡೆದ ಐಆರ್ಬಿ ಕಂಪನಿ ಕಾಮಗಾರಿ ಮುಗಿದರು ಮಾಡದೆ ಇರುವುದನ್ನು ಗಮನಿಸಿದ ಸ್ಥಳೀಯರು ಶನಿವಾರ ಗ್ರಾಮ ಪಂಚಾಯತ, ತಹಸಿಲ್ದಾರ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಐಆರ್ಬಿ ಕಂಪನಿಯವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕಧ್ಯಕ್ಷ ಮಂಜುನಾಥ್ ಗೌಡ ನಾಜಗಾರ ನೇತೃತ್ವದಲ್ಲಿ ಪ್ರಮುಖರಾದ ರಾಮ ಗೌಡ ಹುಡುಕಣಿ, ಗೋವಿಂದ ಗೌಡ ಹೆಬ್ಬಾರಿತ್ಲು, ಸತೀಶ್ ನಾಯ್ಕ್ ಹೊಠಾರ, ರಾಜು ನಾಯ್ಕ್ ಮುಗಳಿ, ರಾಮ ಗೌಡ ಗುಣವಂತೆ, ಗಜು ಪೈ ಗುಣವಂತೆ, ನಾರಾಯಣ ಗೌಡ ಮಾದ್ನಿ, ರಾಮ ಗೌಡ ಶಿವನಗರ, ಪವನ್ ಪೈ ಗುಣವಂತೆ, ನಾರಾಯಣ ಶಂಭು ಗೌಡ ಗುಣವಂತೆ, ವೆಂಕಟೇಶ್ ಗೌಡ ಶಿವನಗರ, ನಾಗೇಶ್ ದೇಶಭಂಡಾರಿ ಹೆಬ್ಬಾರಿತ್ಲು, ಮೋಹನ್ ಗೌಡ ಗುಣವಂತೆ, ವಿನಯ್ ಗೌಡ ಗುಣವಂತೆ, ವಿಶ್ವನಾಥ್ ಇಡಗುಂಜಿ, ನಾಗರಾಜ್ ಗುಣವಂತೆ ಇದ್ದರು.