ಕುಮಟ: ತಾಲೂಕಿನ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಯ ಗ್ರೀನ್ ಕಾರ್ಡ ಪ್ರಮುಖರಿಗೆ ತರಬೇತಿ ಶಿಬಿರವನ್ನ ಸೋಮವಾರ ಜ.೬ರ ಮಧ್ಯಾಹ್ನ ೩ ಗಂಟೆಗೆ ಸ್ಥಳೀಯ ಮಾಸ್ತಿಕಟ್ಟಾ ದೇವಸ್ಥಾನ ಸಂಭಾಗಣದಲ್ಲಿ ಜರುಗಿಸಲಾಗಿದೆ ಎಂದು ತಾಲೂಕಾ ಅರಣ್ಯ ಹಕ್ಕು ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಮಂಜುನಾಥ ಮರಾಠಿ ನಾಗೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ಅರಣ್ಯವಾಸಿಗಳಿಗೆ ಅರಣ್ಯ ಮಂಜೂರಿ ಪ್ರಕ್ರಿಯೆ ಮತ್ತು ಅರಣ್ಯ ಹಕ್ಕು ಕಾಯಿದೆ ಕುರಿತು ಮಾಹಿತಿಯನ್ನ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಮಾಹಿತಿ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತಾಲೂಕಿನ ಗ್ರೀನ್ ಕಾರ್ಡ ಪ್ರಮುಖರು ಗುರುತಿನ ಪತ್ರ ಧರಿಸಿಕೊಂಡು ಶಿಬಿರಕ್ಕೆ ಕಡ್ಡಾಯವಾಗಿ ಹಾಜರಿರಲು ತಿಳಿಸಿದ್ದಾರೆ.