ಶಿರಸಿ: ಇಲ್ಲಿನ ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿ ಮನೋಜ್ ಹೆಚ್. ಅಂಬಿಗ ಚದುರಂಗ ಕ್ರೀಡೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ತಂಡಕ್ಕೆ ಬ್ಲೂ ಆಗಿ ಆಯ್ಕೆಯಾಗಿದ್ದು , ಜ.8 ರಿಂದ ಜ.11ರವರೆಗೆ ತಮಿಳುನಾಡಿನ ಚೆನ್ನೈನ ವೆಲ್ಟೆಕ್ ಆರ್ & ಡಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ನಡೆಯಲಿರುವ ದಕ್ಷಿಣ ವಲಯದ ಅಂತರ ವಿಶ್ವವಿದ್ಯಾಲಯ ಮಟ್ಟದ ಚದುರಂಗ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದು, ವಿದ್ಯಾರ್ಥಿ ಯ ಈ ಸಾಧನೆಗೆ ಎಂ ಇ ಎಸ್ ನ ಅಧ್ಯಕ್ಷ ಜಿ ಎಂ ಹೆಗಡೆ ಮುಳಖಂಡ ಹಾಗೂ ಎಂಇಎಸ್ ನ ಪದಾಧಿಕಾರಿಗಳು, ಉಪಸಮಿತಿ ಅಧ್ಯಕ್ಷ ಎಸ್ ಕೆ ಭಾಗವತ್, ಪ್ರಾಚಾರ್ಯ ಪ್ರೊ ಜಿ ಟಿ ಭಟ್, ಪ್ರಾಧ್ಯಾಪಕರು ಶಿಕ್ಷಕೇತರ ಸಿಬ್ಬಂದಿಗಳು, ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.