ಕಾರವಾರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಪುನರ್ ಪರಿಶೀಲನಾ ಪ್ರಕ್ರಿಯೆ ಅರಣ್ಯ ಹಕ್ಕು ಸಮಿತಿಗಳು ಜರುಗಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಸೋಮವಾರ ಜ.೬ ರಂದು ಮುಂಜಾನೆ ೯.೩೦ ರಿಂದ ೧೧ ಗಂಟೆಯವರೆಗೆ ಕಾರವಾರ ಪತ್ರಿಕಾ ಭವನ (ಜಿಲ್ಲಾಧಿಕಾರಿ ಕಛೇರಿ ಎದುರು) ಸಭೆ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಸ್ತಿತ್ವವಿಲ್ಲದ ಮತ್ತು ಸಂಪೂರ್ಣ ಸಮಿತಿಯಿಂದ ಪುನರ್ ಪರಿಶೀಲನಾ ಕಾರ್ಯದ ಕುರಿತು ೩ ತಲೆಮಾರಿನ ದಾಖಲೆಗೆ ವಿವಿಧ ಅರಣ್ಯ ಹಕ್ಕು ಸಮಿತಿ ನೋಟೀಸ್ ನೀಡುತ್ತಿರುವದು ಹೋರಾಟದ ಮುಂದಿನ ಕ್ರಿಯಾಯೋಜನೆ ರೂಪಿಸುವದು ಮತ್ತು ಗ್ರೀನ್ ಕಾರ್ಡ (ಪ್ರಮುಖರ) ಕಾರ್ಯದ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಗುವದು ಎಂದು ಅವರು ತಿಳಿಸಿದ್ದಾರೆ.
ಸಭೆಗೆ ಗುರುತಿನ ಪತ್ರ ಪಡೆದುಕೊಂಡು ಅರಣ್ಯವಾಸಿಗಳು ಗುರುತಿನ ಪತ್ರ ಧರಿಸಿಕೊಂಡು ಕಡ್ಡಾಯವಾಗಿ ಹಾಜರಿರತಕ್ಕದ್ದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.