Slide
Slide
Slide
previous arrow
next arrow

ಹಳಿಯಾಳದಲ್ಲಿ ಸಂಭ್ರಮ, ಸಡಗರದಿಂದ ನಡೆದ ಕ್ರಿಸ್ಮಸ್ ಸಹಮಿಲನ

300x250 AD

ಹಳಿಯಾಳ: ಪಟ್ಟಣದ ಕಾರ್ಮೆಲ್ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಇತ್ತೀಚೆಗೆ ಹಳಿಯಾಳದ ಕ್ರೈಸ್ತ ಬಾಂಧವರಿಂದ ಕ್ರಿಸ್ಮಸ್ ಸಹಮಿಲನ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ‌‌ ಸಾನಿಧ್ಯ ವಹಿಸಿದ್ದ ಹಳಿಯಾಳ ಮಿಲಾಗ್ರಿಸ್ ಚರ್ಚಿನ ಪ್ರಧಾನ ಗುರುಗಳಾದ ವಂ. ಪ್ರಾನ್ಸಿಸ್ ಮಿರಾಂಡ ಅವರು ಕ್ರಿಸ್ಮಸ್ ಸಹಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ “ಶಾಂತಿ, ಪ್ರೀತಿ, ಸಹಬಾಳ್ವೆ, ಕ್ಷಮೆಯ ಸಂದೇಶ ಸಾರಿದ ದೇವಪುತ್ರ ಯೇಸುಪ್ರಭುವಿನ ಹುಟ್ಟು ಹಬ್ಬವಾದ ಕ್ರಿಸ್ಮಸ್ ಹಬ್ಬವು ನಮ್ಮೆಲ್ಲರಲ್ಲಿ ಶಾಂತಿ ಸೌಹಾರ್ದತೆಯ ಜೀವನ ನಡೆಸಲು ಪ್ರೇರಣೆಯಾಗಲಿ ಎಂದು ಹೇಳಿದರು.

ಸಭಾ ಕಾರ್ಯಕ್ರಮದ ನಂತರ ಪಟ್ಟಣದ ವಿವಿಧ ವಾರ್ಡಗಳ ಕ್ರೈಸ್ತ ಬಾಂಧವರಿಂದ ನಡೆದ ಕ್ರಿಸ್ಮಸ್ ಸಂದೇಶ ಸಾರುವ ಕಿರುನಾಟಕಗಳು, ನೃತ್ಯ ಪ್ರದರ್ಶನಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆಯಿತು.
ಚಿಕ್ಕ ಮಕ್ಕಳು, ಯುವಕರು, ಮಹಿಳೆಯರು ಹಾಗೂ ಹಿರಿಯರು ಸಹಮಿಲನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ‌‌ ಸಂಭ್ರಮಿಸಿದರು.

300x250 AD

ಮಿಲಾಗ್ರಿಸ್ ಚರ್ಚಿನ ಸಹಾಯಕ ಧರ್ಮಗುರು ವಂ. ಅರುಣ ಫರ್ನಾಂಡೀಸ್, ವಂ. ರೇಗನ್ ಫರ್ನಾಂಡೀಸ್, ಕಾರ್ಮೆಲ್ ಕಾನ್ವೆಂಟ್ ಮುಖ್ಯ ಭಗಿನಿ ರೋಜಿಮಾ ಹಾಗೂ ಇತರರ ಭಗಿನಿಯರು ಇದ್ದರು.

Share This
300x250 AD
300x250 AD
300x250 AD
Back to top