ದಾಂಡೇಲಿ : ಮೋಹನ ಹಲವಾಯಿ ಅವರ ಅಧ್ಯಕ್ಷತೆಯ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಸಮಿತಿಯ ನೂತನ ಉಪಾಧ್ಯಕ್ಷರಾಗಿ ಗೌಸ್ ಖತೀಬ, ಅಡಿವೆಪ್ಪ ಭದ್ರಕಾಳಿ, ಬಶೀರ ಗಿರಿಯಲ, ಕಲ್ಪನಾ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿ ಕೀರ್ತಿ ಗಾಂವಕರ, ಮಹಮ್ಮದ್ ಇಕ್ಬಾಲ್ ಶೇಖ, ಮಹಮ್ಮದ್ ಉಸ್ಮಾನ್ ಶೇಖ ಅವರನ್ನು ನೇಮಕ ಮಾಡಲಾಗಿದೆ.
ಬ್ಲಾಕ್ ಕಾಂಗ್ರೆಸ್ ವಕ್ತಾರರಾಗಿ ಎಸ್.ಎಸ್.ಪೂಜಾರ ಹಾಗೂ ಕಾರ್ಯದರ್ಶಿಗಳಾಗಿ ಅನೀಲ ದಂಡಗಲ್, ಮಹಮ್ಮದ್ ರಫೀಕ ಖಾನ್, ರಾಮಲಿಂಗ ಜಾದವ, ಪ್ರಭಾಕರ ಗೋನಾ, ರವೀಂದ್ರ ಷಾ, ಮ್ಯಾಥೂಸ್ ಕೊಂಡಟ್ಟಿ, ಶ್ರೀನಿವಾಸ ಖಂಡೆವಾಲ ಅವರನ್ನು ಆಯ್ಕೆ ಮಾಡಲಾಗಿದೆ.
ಖಜಾಂಚಿಯಾಗಿ ದಿವಾಕರ ನಾಯ್ಕ ಅವರನ್ನು ನಿಯೋಜಿಸಲಾಗಿದೆ. ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವಿ.ಆರ್.ಹೆಗಡೆ, ಯಾಸ್ಮಿನ್ ಕಿತ್ತೂರು, ತಸ್ವರ ಸೌದಾಗರ, ಸರಸ್ವತಿ ರಜಪೂತ, ಎಂ.ಆರ್. ನಾಯಕ, ರಿಯಾಜ್ ಶೇಖ, ದೇವರಾಜ ಜಕ್ಕಂ, ಜೇಮ್ಸ್ ಫರ್ನಾಂಡಿಸ್, ರೇಣುಕಾ ಭಜಂತ್ರಿ, ಕಿರಣ್ ಸಿಂಗ್ ರಜಪೂತ, ಎಂ.ಬಿ. ಅಪ್ಪನ ಗೌಡರ, ಆರ್.ಸಿ.ಸುದರ್ಶನ್, ದಾದಾಪೀರ್ ನದಿಮುಲ್ಲಾ, ಮೇರಿ ತಲಪಾಟಿ, ಶ್ರೀನಿ ಜಾನ್, ರೇಣುಕಾ ಮಾದರ, ಫಿರೋಜ್ ಖಾನ್ ಬಾಲೆಖಾನ್ ಮತ್ತು ಸುರೇಶ್ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ಕರಿಂ ಅಜ್ರೇಕರ ಅವರನ್ನು ಆಯ್ಕೆ ಮಾಡಲಾಗಿದೆ.
ನೂತನ ಪದಾಧಿಕಾರಿಗಳನ್ನು ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆಯವರು ನೇಮಕ ಮಾಡಿ ಆದೇಶವನ್ನು ಹೊರಡಿಸಿ, ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ ಹಲವಾಯಿ ಅವರು ಮಾಧ್ಯಮಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.