ಶಿರಸಿ: ಭಗವಾನ್ ಶ್ರೀಧರ ಸಂಗೀತ ವಿದ್ಯಾಲಯ (ರಿ) ಶಿರಸಿ ಇದರ 5ನೇ ಸಂಗೀತ ನಾದೋಪಾಸನೆ ಕಾರ್ಯಕ್ರಮವು ಜ.5, ರವಿವಾರ ನಗರದ ಯೋಗಮಂದಿರದಲ್ಲಿ ನಡೆಯಲಿದೆ.
ಬೆಳಿಗ್ಗೆ 10 ಘಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದ್ದು ನಂತರ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವಿರಲಿದೆ. ತಬಲಾದಲ್ಲಿ ಕು. ಕೈವಲ್ಯ ಕು. ಚಿನ್ಮಯ್, ನಾರಾಯಣ ಹೆಗಡೆ ಸಂಪಿಗೆಮನೆ ಸಹಕಾರ ನೀಡಲಿದ್ದಾರೆ.
ಸಾಯಂಕಾಲ 6 ರಿಂದ 7 ಗಾಯನ ಕಾರ್ಯಕ್ರಮವನ್ನು ವಿದ್ಯಾಲಯದ ಶಿಕ್ಷಕು ಶ್ರೀಮತಿ ಸ್ಮಿತಾ ಎಂ. ಹೆಗಡೆ, ಕುಂಟೇಮನೆ ನಡೆಸಿಕೊಡಲಿದ್ದು, ತಬಲಾದಲ್ಲಿ ಮಂಜುನಾಥ ಮೋಟಿನಸರ, ಹಾರ್ಮೋನಿಯಂನಲ್ಲಿ ಅಜಯ ಹೆಗಡೆ ವರ್ಗಾಸರ ಸಾಥ್ ನೀಡಲಿದ್ದಾರೆ.
ಸಂಜೆ 7 ರಿಂದ ಗಾಯನ ಆಮಂತ್ರಿತ ಕಲಾವಿದರಾದ ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಶ್ರೀಪಾದ ಹೆಗಡೆ ಕಂಪ್ಲಿ (ಧಾರವಾಡ) ಇವರ ಗಾಯನವಿರಲಿದ್ದು ಅವರಿಗೆ ಶ್ರೀಮತಿ ನಾಗವೇಣಿ ಶ್ರೀಪಾದ ಹೆಗಡೆ ಕಂಪ್ಲಿ ಹಾರ್ಮೋನಿಯಂ ಸಹಕಾರ ಮತ್ತು ಗಣೇಶ ಗುಂಡ್ಕಲ್ (ಯಲ್ಲಾಪುರ) ಇವರು ತಬಲಾ ಸಹಕಾರ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಗೀತಾಭಿಮಾನಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಭಗವಾನ್ ಶ್ರೀ ಭಗವಾನ್ ಶ್ರೀಧರ ಸಂಗೀತ ವಿದ್ಯಾಲಯ ಅಧ್ಯಕ್ಷರು ಹಾಗೂ ಸದಸ್ಯರುಗಳು, ಹಾಗೂ ಸಂಗೀತ ಶಿಕ್ಷಕರಾದ ಶ್ರೀಮತಿ ಸ್ಮಿತಾ ಎಂ. ಹೆಗಡೆ ಕೋರಿರುತ್ತಾರೆ.