ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಕುಮಟಾದ 2002-03ನೇ ಸಾಲಿನ ಪೂರ್ವ ಶಿಕ್ಷಕ ವಿದ್ಯಾರ್ಥಿಗಳು ಗುರುನಮನ ಮತ್ತು ಸ್ನೇಹ ಬಂಧು ಸಮಾಗಮ ಕಾರ್ಯಕ್ರಮವನ್ನು ಕಾಲೇಜಿನ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟಕರಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಎಸ್.ಜಿ.ರಾಯ್ಕರ್ ಶಿಕ್ಷಕರಿಗೆ ವಿದ್ಯಾರ್ಥಿಗಳೇ ಬದುಕಿನ ಬಹುದೊಡ್ಡ ಆಸ್ತಿ, ಶಿಕ್ಷಕನು ವರ್ಗಕೋಣೆಯಲ್ಲಿಯೇ ಪಾಠವನ್ನು ಮಾಡುತ್ತಾ ವೃತ್ತಿ ಸಾರ್ಥಕತೆಯನ್ನು ಕಂಡುಕೊಳ್ಳಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರೀತಿ ಪಿ. ಭಂಡಾರ್‌ಕರ್ ದೇಶ ಕಟ್ಟುವ ಕಾರ್ಯದಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು ಎಂದು ಮಾತನಾಡಿದರು.
ಕಲಿಕೆಗೆ ಮತ್ತು ಸ್ವಾವಲಂಬಿ ಬದುಕಿಗೆ ಪೂರಕವಾಗಿ ಕಾರ್ಯನಿರ್ವಹಿಸಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೂ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಸನ್ಮಾನಿತರು ಮಾತನಾಡಿದರು. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಡಾ. ಶ್ರೀಧರ ಬಳಗಾರ, ಪ್ರೊ. ಎಲ್ ಆರ್ ಕುಲಕರ್ಣಿ, ಡಾ. ವಿ.ಕೆ ಭಟ್, ಡಾ. ಡಿ ಡಿ ಭಟ್, ಪ್ರೊ. ಜಿ.ಡಿ ಭಟ್, ಶ್ರೀಮತಿ ಸರೋಜಾ ಹೆಗಡೆ, ಪ್ರೊ. ಉಮೇಶ ನಾಯ್ಕ ಎಸ್.ಜೆ ಮುಂತಾದವರು ಮಾತನಾಡಿದರು. 2002-03ನೇ ಸಾಲಿನ ಪೂರ್ವ ಶಿಕ್ಷಕ ವಿದ್ಯಾರ್ಥಿಗಳು ಧ್ವನಿವರ್ಧಕವನ್ನು ಕಾಲೇಜಿನ ಉಪಯೋಗಕ್ಕೆ ನೀಡಿದರು.
2002-03ನೇ ಸಾಲಿನ ಪೂರ್ವ ಶಿಕ್ಷಕ ವಿದ್ಯಾರ್ಥಿಗಳಾದ ವಿನಾಯಕ ನಾಯ್ಕ, ಮಂಜುನಾಥ, ಚಂದ್ರು ನಾಯ್ಕ, ಶ್ರೀಮತಿ ರೂಪಾ ಖಾರ್ವಿ ಮುಂತಾದವರು ಕಾಲೇಜಿನ ದಿನಗಳನ್ನು ಮತ್ತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅಗಲಿದ ಗುರುಗಳಿಗೆ, 2002-03ನೇ ಸಾಲಿನ ಸಹಪಾಠಿ ಸ್ನೇಹಿತರಿಗೆ, ಡಾ. ಮನಮೋಹನ ಸಿಂಗ್ ಮತ್ತು ರತನ್ ಟಾಟಾ ಅವರಿಗೆ ಶ್ರಧ್ಧಾಂಜಲಿ ಸಲ್ಲಿಸಿದರು. ಶ್ರೀಮತಿ ಕಲ್ಪನಾ ನಾಯ್ಕ ಪ್ರಾರ್ಥಿಸಿದರು. ಮೋಹನ್ ಜಿ. ಸ್ವಾಗತಿಸಿದರು.ಚನ್ನಪ್ಪ ಗೌಡ್ರ ಪ್ರಾಸ್ತಾವಿಕ ಮಾತನಾಡಿದರು. ಗಣಪತಿ ಶೆಟ್ಟಿ ವಂದಿಸಿದರು. ಚಂದ್ರು ನಾಯ್ಕ ಮತ್ತು ಶ್ರೀಮತಿ ರೂಪಾ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು.