ಸಿದ್ದಾಪುರ: ಪಟ್ಟಣದ ಎಂಜಿಸಿ ಕಲಾ, ವಾಣಿಜ್ಯ ಮತ್ತು ಜಿಎಚ್‌ಡಿ ವಿಜ್ಞಾನ ಮಹಾವಿದ್ಯಾಲಯದ ಬಿಕಾಂ ದ್ವಿತೀಯ ವರ್ಷದ ಮಾನಸಾ ಹೆಗಡೆ ಇವಳು ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆ ಆಗಿದ್ದಾಳೆ.
ಅಕ್ಯಾಡೆಮಿ ವಿಶ್ವವಿದ್ಯಾಲಯ ಚೆನೈ (ತಮಿಳುನಾಡು)ನಲ್ಲಿ ಜ. 3 ರಿಂದ 5ರವರೆಗೆ ನಡೆಯುವ ಅಂತರ್ ವಿಶ್ವವಿದ್ಯಾಲಯದ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಿದ್ದಾಳೆ ಎಂದು ಮಹಾವಿದ್ಯಾಲಯದ ಪ್ರಕಟಣೆ ತಿಳಿಸಿದೆ.