Slide
Slide
Slide
previous arrow
next arrow

ಗೀತಾ ಹುಡೇಕರ್ ಕೊಲೆ ಪ್ರಕರಣದ ಆರೋಪಿ ಬಂಧನ

300x250 AD

ಸಿದ್ದಾಪುರ: ಪಟ್ಟಣದ ಒಂಟಿ ಮಹಿಳೆಯ ಕೊಲೆಗೈದು ಹಣ ಮತ್ತು ಒಡವೆಯನ್ನು ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಭಿಜಿತ್ ಗಣಪತಿ ಮಡಿವಾಳ ಕೊಂಡ್ಲಿ (30) ಬಂಧಿತ ಆರೋಪಿ. ಪಟ್ಟಣದ ಬಸವಣ್ಣಗಲ್ಲಿಯ ಪಿಗ್ಮಿ ಸಂಗ್ರಹಕಳಾಗಿ ಕಾರ್ಯನಿರ್ವಹಿಸುತ್ತಿದ್ದ ಗೀತಾ ಹುಂಡೆಕರ್ ಎನ್ನುವ ಒಂಟಿ ಮಹಿಳೆಯನ್ನು ಡಿ. 23ರ ರಾತ್ರಿ ಕೊಲೆಗೈದು ಹಣ ಮತ್ತು ಬಂಗಾರದ ಓಲೆಯನ್ನು ಕಳವು ಮಾಡಿ ಪರಾರಿಯಾಗಿದ್ದನು. ಪ್ರಕರಣ ಡಿ. 25 ರಂದು ಬೆಳಗ್ಗೆ ಬೆಳಕಿಗೆ ಬಂದಿತ್ತು. ಕೊಲೆ ಆರೋಪಿ ಪತ್ತೆಗಾಗಿ ಉತ್ತರಕನ್ನಡ ಜಿಲ್ಲೆ ಪೊಲೀಸ್ ಅಧೀಕ್ಷಕ ಎಂ.ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ನಾಯ್ಕ, ಶಿರಸಿ ಉಪವಿಭಾಗದ ಉಪಾಧೀಕ್ಷಕ ಗಣೇಶ ಕೆ.ಎಲ್. ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಠಾಣೆಯ ಸಿಪಿಐ ಜೆ.ಬಿ ಸೀತಾರಾಮ ನೇತೃತ್ವದಲ್ಲಿ 2ತಂಡಗಳಲ್ಲಿ ಪಿಎಸ್‌ಐ ಅನೀಲ್ ಬಿ.ಎಂ. ಪಿಎಸ್ಐ ಗೀತಾ ಶಿರ್ಶಿಕರ್, ಎಎಸ್ಐ ರಮೇಶ ಗೌಡ, ಎಎಸ್ಐ ಸಂಗಿತಾ ಕಾನಡೆ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಡಿ.30ರಂದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು 20680ರೂ ಪಿಗ್ಮಿ ಸಂಗ್ರಹಿದ ಹಣ ಮತ್ತು 4ಗ್ರಾಂ ತೂಕದ ಬಂಗಾರದ ಓಲೆಯನ್ನು ಕಳವು ಮಾಡಿದ್ದನು.
4ಗ್ರಾಂ ತೂಕದ ಬಂಗಾರದ ಓಲೆಯನ್ನು ಪಟ್ಟಣದ ಮುತ್ತೂಟ್ ಫೈನಾನ್ಸ್ನಲ್ಲಿ ಗಿರವಿ ಇಟ್ಟು 18725ರೂ ಹಣ ಪಡೆದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯ ಮೇಲೆ ಠಾಣೆಯಲ್ಲಿ ಈ ಹಿಂದೆ 5 ಪ್ರಕರಣಗಳು ದಾಖಲಾಗಿದ್ದು, 2 ಪ್ರಕರಣಗಳಲ್ಲಿ ಶಿಕ್ಷೆ ಪಡೆದು ಜಾಮೀನು ಪಡೆದು ಹೊರಬಂದಿದ್ದ.ಠಾಣೆಯಲ್ಲಿ ಗೂಂಡಾ ಕಾಯ್ದೆಯ ಅಡಿಯಲ್ಲಿಯೂ ಈತನ ಹೆಸರು ದಾಖಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

300x250 AD
Share This
300x250 AD
300x250 AD
300x250 AD
Back to top