ಹೊನ್ನಾವರ: ರೋಟರಿ ಜಿಲ್ಲಾ ಗವರ್ನರ್ ಶರದ್ ಪೈ ರವರು ಹೊನ್ನಾವರ ಕ್ಲಬ್ಗೆ ಅಧಿಕೃತ ಭೇಟಿಕೊಟ್ಟ ಸಂದರ್ಭದಲ್ಲಿ ವಿಕಲಚೇತನ ವಿಶೇಷ ಶಾಲೆಯಾದ ಪೆದ್ರು ಪೊವೆಡಾ ಶಾಲೆಗೆ ಅಂದಾಜು ರೂಪಾಯಿ ೩೦,೦೦೦/- ವೆಚ್ಚದ ಇನ್ವರ್ಟರ್ನ್ನು ದೇಣಿಗೆಯಾಗಿ ನೀಡಿದರು. ಮಕ್ಕಳೊಡನೆ ಬೆರೆತು ಕೇಕ್ ಕತ್ತರಿಸಿ, ತಿನ್ನಿಸಿ ಮತ್ತು ಸಿಹಿ ವಿತರಿಸಿ, ಮಾತನಾಡಿ ಶಾಲೆಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೊಂದು ಮಾನವೀಯ ಕಾರ್ಯ ಎಂದು ಶ್ಲಾಘಿಸಿದರು.
ಹೊನ್ನಾವರ ಶಾಂತಿಧಾಮ ರುದ್ರ ಭೂಮಿಗೆ ರೋಟರಿ ಕ್ಲಬ್ ಹೊನ್ನಾವರ ವತಿಯಿಂದ ಅಂದಾಜು ರೂ. ಒಂದು ಲಕ್ಷ ವೆಚ್ಚದ ಶವ ದಹಿಸುವ ಘಟಕವನ್ನು ದೇಣೆಗೆಯಾಗಿ ನೀಡಲಾಯಿತು.
ಈ ಎಲ್ಲಾ ಕಾರ್ಯಕ್ರಮದಲ್ಲಿ ರೋಟೋರಿಯನ್ ರಾಘವೇಂದ್ರ ಪ್ರಭು, ಸಹಾಯ ಗವರ್ನರ್, ರೋಟರಿ ಜಿಲ್ಲಾ ಸಂಯೋಜಕಿ ರೋ. ಜಯಶ್ರೀ ಕಾಮತ್, ಸಹಾಯಕ ಗವರ್ನರ್ ರೊ. ಸ್ಟೀಫನ್ ರೋಡ್ರಗಿಸ್, ರೋಟರಿ ಅಧ್ಯಕ್ಷರಾದ ಸೂರ್ಯಕಾಂತ್ ಸಾರಂಗ್, ಕಾರ್ಯದರ್ಶಿ ಎಂ ಎಂ ಹೆಗಡೆ, ಖಜಾಂಚಿ ಎಸ್. ಎನ್. ಹೆಗಡೆ, ಹಿರಿಯ ರೋಟರಿಯನ್ಗಳು, ಉಪಸ್ಥಿತರಿದ್ದರು.