ಹೊನ್ನಾವರ : ತಾಲೂಕಾ ಆಸ್ಪತ್ರೆಗೆ ರೋಟರಿ ಕ್ಲಬ್ ನಿಂದ ಅಂದಾಜು 150000 ವೆಚ್ಚದ ಶವ ಶೈತ್ಯಾಗಾರ ಪೆಟ್ಟಿಗೆಯನ್ನು ದೇಣಿಗೆಯಾಗಿ ನೀಡಿದೆ.
ರೋಟರಿ ಜಿಲ್ಲಾ ಗವರ್ನರ್ ಶರದ್ ಪೈ ಇದನ್ನು ಉದ್ಘಾಟಿಸಿ ಮಾತನಾಡಿ ರೋಟರಿ ಕ್ಲಬ್ ಹೊನ್ನಾವರ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ. ಇದರಿಂದ ಸಾರ್ವಜನಿಕರಿಗೆ ತುಂಬಾ ಉಪಯೋಗವಾಗುತ್ತದೆ ಎಂದು ಹೇಳಿದರು.
ತಾಲೂಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ರಾಜೇಶ್ ಕಿಣಿ ಮಾತನಾಡಿ ರೋಟರಿ ಕ್ಲಬ್ ನಮಗೆ ಅನೇಕ ರೀತಿಯಲ್ಲಿ ಸಹಾಯ ಮಾಡಿದೆ. ಈಗಾಗಲೇ ಸ್ತನ್ಯಪಾನಕೇಂದ್ರ, ತ್ಯಾಜ್ಯ ನೀರನ್ನು ನಿರ್ಮಲೀಕರಣಗೊಳಿಸುವ ಘಟಕ ನೀಡಿದ್ದು. ಈಗ ನೀಡಿರುವ ಶವಶೈತ್ಯಾಗಾರ ಪೆಟ್ಟಿಗೆ ಸಾರ್ವಜನಿಕರಿಗೆ ತುಂಬಾ ಉಪಕಾರಿಯಾಗುತ್ತದೆ ಎಂದು ಹೇಳಿದರು.