ಶಿರಸಿ: ಕಠಿಣ ಪರೀಕ್ಷೆ ಎನಿಸಿದ ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಪರೀಕ್ಷೆಯಲ್ಲಿ ತಾಲೂಕಿನ ಕುಮಾರಿ ಪ್ರತೀಕ್ಷಾ ವಿನಯಭೂಷಣ ಭಂಡಾರಕರ ಉತ್ತೀರ್ಣವಾಗುವ ಮೂಲಕ ಉತ್ತಮ ಸಾಧನೆ ಗೈದಿದ್ದಾಳೆ. ಬಾಲ್ಯದಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಈಕೆಯು ಶಿರಸಿಯ ವಿನಯಭೂಷಣ ಭಂಡಾರಕರ ಹಾಗೂ ಶ್ರೀಮತಿ ನಯನಾ ಭಂಡಾರಕರ ದಂಪತಿಗಳ ಪುತ್ರಿಯಾಗಿದ್ದಾಳೆ. ಈಕೆಯ ಸಾಧನೆಗೆ ಕುಟುಂಬ ಎಲ್ಲಾ ಸದಸ್ಯರು ಹಾಗೂ ಎಲ್ಲಾ ಆಪ್ತೇಷ್ಟರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸಿಎ ಪರೀಕ್ಷೆ: ಪ್ರತೀಕ್ಷಾ ಭಂಡಾರಕರ ಉತ್ತೀರ್ಣ
![](https://euttarakannada.in/wp-content/uploads/2025/01/IMG-20250101-WA0023-508x438.jpg)