ಕುಮಟಾ: ಭಾರತೀಯ ವಾಯುಸೇನೆಯ ಪೈಲಟ್ ಸ್ಕ್ವಾಡ್ರನ್ ಲೀಡರ್ ಶಿವಕುಮಾರ್ ಎಸ್. ಭಟ್ಕೆರೆ ಅವರು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಬಿ.ಕೆ. ಭಂಡಾರಕರ್ಸ ಸರಸ್ವತಿ ಪದವಿಪೂರ್ವ ಕಾಲೇಜಿಗೆ ಆಗಮಿಸಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಭಾರತೀಯ ಸೈನ್ಯ ಸೇವೆಯ ಬಗ್ಗೆ ಹಾಗೂ ಭಾರತೀಯ ವಾಯು ಪಡೆಯ ವಿಶೇಷತೆಯ ಕುರಿತು ಉಪನ್ಯಾಸ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ವಿಧಾತ್ರಿ ಅಕಾಡೆಮಿ ಮಂಗಳೂರು ಇದರ ವತಿಯಿಂದ ಸಹ ಸಂಸ್ಥಾಪಕರಾದ ಗುರುರಾಜ ಶೆಟ್ಟಿಯವರು ಶಿವಕುಮಾರರವರನ್ನು ಸನ್ಮಾನಿಸಿದರು.
ಪ್ರಾಚಾರ್ಯ ಕಿರಣ ಭಟ್ಟ ಹುತ್ಗಾರ,ಶಿವಕುಮಾರ ಅವರ ತಾಯಿ ಶ್ರೀಮತಿ ಜ್ಯೋತಿ ಎಸ್ ಭಟ್ಕೆರೆ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ಚಿದಾನಂದ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.