ಶಿರಸಿ: ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್‌ಸಿಸಿ ಕೆಡೆಟ್ ಆದ ನಿಖಿಲ್ ಕೆ. ವೆರ್ಣೆಕರ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆಯುವ ಎಸ್ಎನ್ಐಸಿ, ಪಿಎಂ ರ‌್ಯಾಲಿಗೆ ಆಯ್ಕೆಯಾಗಿದ್ದಾನೆ. ಪ್ರಸ್ತುತ ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿಕಾಮ್ ದ್ವಿತೀಯ ವರ್ಷದ ವಿದ್ಯಾರ್ಥಿ ಆಗಿದ್ದು, ಇವನ ಈ ಸಾಧನೆಗೆ ಎಂಇಎಸ್ ನ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಹಾಗೂ ಎಂಇಎಸ್ ನ ಪದಾಧಿಕಾರಿಗಳು, ಉಪಸಮಿತಿ ಅಧ್ಯಕ್ಷ ಎಸ್. ಕೆ. ಭಾಗವತ್, ಪ್ರಾಚಾರ್ಯ ಪ್ರೊ. ಜಿ.ಟಿ ಭಟ್,ಎನ್‌ಸಿಸಿ ಅಧಿಕಾರಿ ರಾಘವೇಂದ್ರ ಜಾಜಿಗುಡ್ಡೆ, ಪ್ರಾಧ್ಯಾಪಕರು ಶಿಕ್ಷಕೇತರ ಸಿಬ್ಬಂದಿಗಳು, ಮಹಾವಿದ್ಯಾಲಯದ ಎಲ್ಲಾ ಎನ್‌ಸಿಸಿ ಕೆಡೆಟ್ ಗಳು ಹರ್ಷ ವ್ಯಕ್ತಪಡಿಸಿದ್ದಾರೆ.