Slide
Slide
Slide
previous arrow
next arrow

ಅರಣ್ಯ ಹಕ್ಕು ಅರ್ಜಿ ಪುನರ್ ಪರಿಶೀಲನೆ ಪ್ರಕ್ರಿಯೆಗೆ ಆಕ್ಷೇಪ

300x250 AD

ಮೂರು ತಲೆಮಾರಿನ ದಾಖಲೆಗೆ ಆಗ್ರಹಿಸುವದು ಕಾನೂನು ಭಾಹಿರ: ರವೀಂದ್ರ ನಾಯ್ಕ

ಸಿದ್ದಾಪುರ: ಅಸ್ಥಿತ್ವವಿಲ್ಲದ ಕಾನೂನು ಭಾಹಿರ ಸಮಿತಿಯಿಂದ ಮತ್ತು ನಿರ್ದಿಷ್ಟ ಮೂರು ತಲೆಮಾರಿನ ದಾಖಲೆ ಆಗ್ರಹಿಸುವುದಕ್ಕೆ ಬೃಹತ್ ಸಂಖ್ಯೆಯಲ್ಲಿ ಉಪ ಅರಣ್ಯ ಹಕ್ಕು ಸಮಿತಿಗೆ ಬೃಹತ್ ಸಂಖ್ಯೆಯಲ್ಲಿ ಅರಣ್ಯವಾಸಿಗಳು  ಆಕ್ಷೇಪಣಾ ಪತ್ರ ಸಲ್ಲಿಸಿದ್ದರು.

ಇಂದು ಡಿ.೩೧ ರಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಶಿರಸಿ ಉಪವಿಭಾಗ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರಾದ ಕಾವ್ಯರಾಣಿ ಕೆ.ವಿ ಅವರಿಗೆ ಸಿದ್ದಾಪುರ ತಹಶೀಲ್ದಾರ್ ಕಛೇರಿಯಲ್ಲಿ ಕಾನೂನು ಭಾಹಿರ ಆಕ್ಷೇಪಣಾ ಪತ್ರವನ್ನ ಸಲ್ಲಿಸಿದರು.

ಅರಣ್ಯವಾಸಿಗಳಿಗೆ ಅರ್ಜಿ ಪರಿಶೀಲನಾ ಸಮಯದಲ್ಲಿ ಕುದ್ದಾಗಿ ಹಾಜರಿದ್ದು ಈಗಾಗಲೇ ಸಲ್ಲಿಸಿರುವ ದಾಖಲಾತಿಗಳನ್ನು ಹೊರತುಪಡಿಸಿ, ಅರಣ್ಯ ಹಕ್ಕು ಕಾಯಿದೆಯ ನಿಯಮನುಸಾರ ದಿ.ಡಿಸೆಂಬರ್ ೧೩,೨೦೦೫ ಕ್ಕಿಂತಲೂ ಪೂರ್ವ (ಮೂರು ತಲೆಮಾರಿನ ಪೂರ್ವದಿಂದ ಅಂದರೆ ೧೯೩೦) ಪ್ರಧಾನವಾಗಿ ಅರಣ್ಯಗಳಲ್ಲಿ ವಾಸಿಸಿರುವ ಅಥವಾ ವಾಸ್ತವಿಕ ಜೀವನೋಪಾಯದ ಅವಶ್ಯಕತೆಗಳಿಗಾಗಿ ಅರಣ್ಯದ ಅಥವಾ ಅರಣ್ಯ ಜಮೀನಿನ ಮೇಲೆ ಅವಲಂಬಿತವಾಗಿರುವ ಬಗ್ಗೆ ಧೃಡಿಕೃತ ದಾಖಲೆಗಳನ್ನು ಅಥವಾ ಸಾಗುವಳಿ ಅಥವಾ ವಾಸ ಮಾಡುತ್ತಿರುವ ಅರಣ್ಯ ಜಮೀನಿನ ಕಬ್ಜಾ ಹೊಂದಿರುವ ಬಗ್ಗೆ ಸರ್ಕಾರದ ದಂಡ ಅಥವಾ ಆದೇಶ, ನೋಟೀಸ್ ಅಥವಾ ಇನ್ನೀತರೆ ಸರ್ಕಾರ ದಾಖಲೆಗಳನ್ನು ಧೃಡಿಕರಿಸಿ ಹಾಜರಪಡಿಸಬೇಕಾಗಿ ಅರಣ್ಯವಾಸಿಗಳಿಗೆ ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿಯ ಸದಸ್ಯ ಕಾರ್ಯದರ್ಶಿಯಿಂದ ತಿಳುವಳಿಕೆ ಪತ್ರವನ್ನ ನೀಡುತ್ತಿರುವದಕ್ಕೆ ಮತ್ತು ಪುನರ್ ಪರಿಶೀಲನಾ ವಿಚಾರಣೆಗೆ ತೀವ್ರ ಆಕ್ಷೇಪ ವ್ಯಕ್ತವಾದವು.

300x250 AD

  ಸಭೆಯಲ್ಲಿ ಹರಿಹರ ನಾಯ್ಕ ಓಂಕಾರ್ ಸೀತರಾಮ ಗೌಡ ಹುಕ್ಕಳಿ, ವಿನಾಯಕ ನಾಯ್ಕ ಕಾನಗೋಡ, ದಿನೇಶ ಬೇಡ್ಕಣಿ, ರಾಘವೇಂದ್ರ ಕವಂಚೂರು, ವಿದ್ಯಾ ನಾಯ್ಕ ಹಾರ್ಸಿಕಟ್ಟಾ, ಸತೀಶ ತ್ಯಾಗಲಿ, ನಾರಾಯಣ ಜಿ ನಾಯ್ಕ, ನಾಗೇಶ ಕನ್ನಾ ಕಲ್ಯಾಣಪುರ್, ಜಯಂತ ಬಿ ನಾಯ್ಕ, ಆರ್.ಟಿ.ನಾಯ್ಕ, ಮಹಮ್ಮದ್ ರಫೀಕ ಸಾಬ, ಅಬ್ದುಲ್ ಕಾದರ ಶೇಖ್ ಮುಂತಾದವರು ಉಪಸ್ಥಿತರಿದ್ದರು.

ಪ್ರಕ್ರಿಯೆ ತಡೆಗೆ ಆಗ್ರಹ:
ಕಾನೂನು ವ್ಯತಿರಿಕ್ತವಾಗಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಪುನರ್ ಪರಿಶೀಲನಾ ಕಾರ್ಯ ಜರುಗಿಸುವುದು ಸಮಂಜಸವಲ್ಲ. ಇಂತಹ ಪ್ರಕ್ರಿಯೆಯನ್ನು ತಡೆಹಿಡಿಯಬೇಕೆಂದು ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದರು.

Share This
300x250 AD
300x250 AD
300x250 AD
Back to top