Slide
Slide
Slide
previous arrow
next arrow

ಕೇರಂನಲ್ಲಿ ಶಿರಸಿಯ ಅಪೇಕ್ಷಾ ರಾಷ್ಟ್ರ ಮಟ್ಟಕ್ಕೆ ಆಯ್ಕೆ

300x250 AD

ಶಿರಸಿ: ಇಲ್ಲಿನ ಶಾಸಕರ ಮಾದರಿ ಶಾಲೆಯ 7ನೇ ತರಗತಿಯಲ್ಲಿ ಓದುತ್ತಿರುವ ಅಪೇಕ್ಷಾ ಬಾಲಚಂದ್ರ ಭಂಡಾರಿ ಬೆಂಗಳೂರಿನಲ್ಲಿ ನಡೆದ ರಾಜ್ಯ ರಾಂಕಿಂಗ್ ಕೇರಂ ಪಂದ್ಯಾವಳಿಯಲ್ಲಿ ಜ್ಯೂನಿಯರ್ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಹಾಗೂ ಮಹಿಳೆಯರ ವಿಭಾಗದಲ್ಲಿ 4 ರಾಷ್ಟ್ರೀಯ ಮಟ್ಟದ ಆಟಗಾರ್ತಿಯರನ್ನು ಮಣಿಸಿ ಅಚ್ಚರಿ ಫಲಿತಾಂಶ ಪಡೆದು ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಕೇರಂ ಪಂದ್ಯಾವಳಿಗೆ ಆಯ್ಕೆಯಾಗಿದ್ದಾಳೆ. 12 ವರ್ಷದ ಹುಡುಗಿ ಮಹಿಳೆಯರ ವಿಭಾಗದಲ್ಲಿ ಈ ಸಾಧನೆ ಮಾಡಿದ ಜಿಲ್ಲೆಯ ಮೊದಲ ಪ್ರತಿಭೆಯಾಗಿದ್ದಾಳೆ.
ಶ್ರೀ ಮಾರಿಕಾಂಬಾ ಹೈಸ್ಕೂಲ್ ನಲ್ಲಿ 9 ನೇ ತರಗತಿ ವಿದ್ಯಾರ್ಥಿಯಾದ ವಿಷ್ಣು ವಿಕ್ರಂ ಹರ್ಡಿಕರ್ ಈತನು ಜೂನಿಯರ್ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುತ್ತಾನೆ. ಈ ಇಬ್ಬರು ವಿಧ್ಯಾರ್ಥಿಗಳು ಶಿರಸಿ ಯ ಸ್ಫೂರ್ತಿ ಕೇರಂ ಅಸೋಸಿಯೇಷನ್ ಅಧ್ಯಕ್ಷರಾದ ಹಾಗೂ ರಾಷ್ಟ್ರೀಯ ನಿರ್ಣಾಯಕರಾದ ಚಂದ್ರು ಭಟ್ ರಲ್ಲಿ ತರಬೇತಿ ಪಡೆಯುತ್ತಿದ್ದಾರೆ.ಚಂದ್ರು ಭಟ್ 3 ನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಸಾಧಕ ರತ್ನ ಸನ್ಮಾನ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

300x250 AD
Share This
300x250 AD
300x250 AD
300x250 AD
Back to top