ಸಿದ್ದಾಪುರ: ತಾಲೂಕಿನ ಕೊಳಗಿಯ ಸಮಾಜ ಮಂದಿರದಲ್ಲಿ ಕೊಳಗಿ- ಶಿರಳಗಿ ಗ್ರಾಮಸ್ಥರ ಒಗ್ಗೂಡುವಿಕೆಯಲ್ಲಿ ಇಂದು ಡಿ.31ರ ಸಂಜೆ 6ರಿಂದ ಅಭಿನಂದನೆ-ಸಂತೋಷ ಕೂಟ ಕಾರ್ಯಕ್ರಮ ಜರುಗಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಬಡಗುತಿಟ್ಟಿನ ಯಕ್ಷಗಾನದ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿಯವರನ್ನು ಅಭಿನಂದಿಸಲಾಗುವದು. ನಂತರ ಸಂತೋಷ ಕೂಟ ಜರುಗಲಿದೆ.