ಸಿದ್ದಾಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಸುಷಿರ ಸಂಗೀತ ಪರಿವಾರ ಭುವನಗಿರಿ-ಕಲ್ಲಾರೆಮನೆ ಇವರಿಂದ ಭುವನಗಿರಿ ಭುವನೇಶ್ವರಿ ದೇವಾಲಯದ ಸಭಾಭವನದಲ್ಲಿ ಗಾನಗೋಷ್ಠಿ ಕಾರ್ಯಕ್ರಮ ಡಿ.31ರಂದು ಸಂಜೆ 6ರಿಂದ ನಡೆಯಲಿದೆ.
ಶ್ರೀಧರ ಹೆಗಡೆ ಸಾಗರ ಇವರಿಂದ ಲಘು ಶಾಸ್ತ್ರೀಯ ಗಾಯನ ನಡೆಯಲಿದ್ದು ಇವರಿಗೆ ತಬಲಾದಲ್ಲಿ ನಿಖಿಲ್ ವಿ.ಕುಂಸಿ, ಹಾರ್ಮೋನಿಯಂನಲ್ಲಿ ಸಂವತ್ಸರ ಸಾಗರ ಸಾಥ್ ನೀಡಲಿದ್ದಾರೆ.
ನಂತರ ನಿತೇಶ್ ಸಾವಂತ ಗೋವಾ ಇವರಿಂದ ಶಾಸ್ತ್ರೀಯ ಗಾಯನ ನಡೆಯಲಿದ್ದು ಇವರಿಗೆ ನಿತಿನ್ ಹೆಗಡೆ ಕಲಗದ್ದೆ ತಬಲಾದಲ್ಲಿ ಹಾಗೂ ಅಜಯ ಹೆಗಡೆ ವರ್ಗಾಸರ ಹಾರ್ಮೋನಿಯಂ ಸಾಥ ನೀಡಲಿದ್ದಾರೆ ಎಂದು ಸುಷಿರ ಸಂಗೀತ ಪರಿವಾರದ ಸಂಚಾಲಕ ನರಾಯಣ ಹೆಗಡೆ ಕಲ್ಲಾರೆಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.