Slide
Slide
Slide
previous arrow
next arrow

ಮನುಷ್ಯನ ವ್ಯಕ್ತಿತ್ವ ನಿರ್ಮಾಣದಲ್ಲಿ ಕ್ರೀಡೆಯ ಪಾತ್ರ ಅತಿಮಹತ್ವದ್ದು: ಡಾ.ನಂದಕುಮಾರ

300x250 AD

ಸಿದ್ದಾಪುರ: ಕ್ರೀಡೆ ಮನುಷ್ಯನಿಗೊಂದು ವ್ಯಕ್ತಿತ್ವವನ್ನು ಕಲ್ಪಿಸುತ್ತದೆ. ದೈಹಿಕ, ಮಾನಸಿಕ ವಿಕಸನ ಮತ್ತು ಜೀವನೋತ್ಸಾಹವನ್ನು ಯಾವತ್ತೂ ರಕ್ಷಿಸಿಕೊಂಡು ಬರುವಲ್ಲಿ ಹಾಗೂ ಮಾನವ ಸಂಪನ್ಮೂಲವನ್ನು ಸದುಪಯೋಗಪಡಿಸುವಲ್ಲಿ ಕ್ರೀಡೆ ಅತ್ಯಂತ ಸಹಕಾರಿ ಎಂದು ಪಶುಸಂಗೋಪನಾ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಡಾ.ನಂದಕುಮಾರ ಪೈ ಹೇಳಿದರು.

ಪಟ್ಟಣದ ರಾಘವೇಂದ್ರ ಮಠದ ಸಭಾಂಗಣದಲ್ಲಿ ಸ್ಪೋರ್ಟ್ಸ್ ಅಕಾಡೆಮಿ ಸಿದ್ದಾಪುರ ಹಾಗೂ ಭಟ್ ಚೆಸ್ ಸ್ಕೂಲ್ ಶಿರಸಿ ಆಶ್ರಯದಲ್ಲಿ 16 ವರ್ಷದ ಒಳಗಿನ ಮಕ್ಕಳಿಗೆ ಹಾಗೂ ಮುಕ್ತ ವಿಭಾಗದಲ್ಲಿ ಆಯೋಜಿಸಿದ್ದ ದಿವಂಗತ ಶಂಕರ್ ಶೇಟ್ ಸ್ಮರಣಾರ್ಥ 3ನೇ ವರ್ಷದ ರಾಪಿಡ್ ಚೆಸ್ ಪಂದ್ಯಾವಳಿ ಉದ್ಘಾಟಿಸಿ ಅವರು ಭಾನುವಾರ ಮಾತನಾಡಿದರು.
ಪಪಂ ಸದಸ್ಯ ಗುರುರಾಜ ಶಾನಭಾಗ ಮಾತನಾಡಿ ಸಾಧನೆ ಮಾಡುವಾಗ ಸೂಕ್ತ ಶಿಕ್ಷಣ ಮತ್ತು ತರಬೇತಿ ಅತ್ಯವಶ್ಯ. ಕ್ರೀಡೆಯಿಂದ ಕ್ರೀಡಾಪಟುಗಳು ತಮ್ಮ ವ್ಯಕ್ತಿತ್ವವನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದರು.
ಸ್ಪೋರ್ಟ್ಸ್ ಅಕಾಡೆಮಿ ನಿರ್ದೇಶಕ ಸುದರ್ಶನ್ ಪಿಳ್ಳೇ ಮಾತನಾಡಿ ದಿವಂಗತ ಶಂಕರ್ ಶೇಟ್ ಅವರ ಸಾಧನೆ ಕುರಿತು ವಿಶ್ಲೇಷಿಸಿ, ಮಕ್ಕಳನ್ನು ಬುದ್ಧಿಶಾಲಿಯಾಗಿಸುವ ಕ್ರೀಡೆಯಲ್ಲಿ ಆಸಕ್ತಿ ಹುಟ್ಟಿಸಲು ಪಾಲಕರು ಮುಂದಾಗಬೇಕು ಎಂದರು.
ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ವಿನಾಯಕ್ ಶಂಕರ್ ಶೇಟ ಅಧ್ಯಕ್ಷತೆ ವಹಿಸಿದ್ದರು. ಲಲಿತಾ ಶಂಕರ್ ಶೇಟ್, ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ದೇವಿದಾಸ್ ವಿ. ಶೇಟ್ , ಅಕಾಡೆಮಿ ನಿರ್ದೇಶಕ ಮಂಜು ಕುರುಬರ ಇತರರಿದ್ದರು.
ಅಕಾಡೆಮಿಯ ನಿರ್ದೇಶಕ ಪ್ರಶಾಂತ್ ಡಿ. ಶೇಟ್ ಸ್ವಾಗತಿಸಿದರು.ಯೋಗ ಶಿಕ್ಷಕ ಮಂಜುನಾಥ ಎಂ. ನಾಯ್ಕ ವಂದಿಸಿದರು. ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ನಂದನ ಬೋರಕರ ಕಾರ್ಯಕ್ರಮ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top