ಶಿರಸಿ:
ವೈದಿಕ ಕ್ಷೇತ್ರದಲ್ಲಿ ಪ್ರಸಿದ್ದಿಯನ್ನು ಪಡೆದಿರುವ ತಾಲೂಕಿನ ಮತ್ತಿಘಟ್ಟದ ಪುಟ್ಟಯ್ಯ ಭಟ್ಟರಿಗೆ ಅಖಿಲ ಹವ್ಯಕ ಮಹಾಸಭಾದಿಂದ ‘ಹವ್ಯಕ ವೇದ ರತ್ನ’ ಪುರಸ್ಕಾರ ನೀಡಿ ಗೌರವಿಸಿದೆ.
ಅವರು ಕೃಷ್ಣ ಯಜುರ್ವೇದವನ್ನು ಅಭ್ಯಾಸ ಮಾಡಿದ್ದು,
ಅಧ್ಯಯನದ ಅನಂತರ ಮಹಾರಾಷ್ಟ್ರದಲ್ಲಿ ಹಾಗೂ ವರದಪುರದ ಪಾಠಶಾಲೆಯಲ್ಲಿ ವೇದಪಾಠವನ್ನು ಅನೇಕ ವರ್ಷಗಳ ಕಾಲ ಮಾಡಿದ್ದಾರೆ ಸಮಾಜದಲ್ಲಿ ನಡೆಯುವ ಅನೇಕ ದೊಡ್ಡ ಯಾಗಗಳಿಗೆ ನೇತೃತ್ವವನ್ನುವಹಿಸಿರುವಂತಹ ಇವರು ಮಾಡಿರುವ ಸರಸ್ವತ ಸೇವೆ ಅಪೂರ್ವ. ಇವರ ನಿಸ್ವಾರ್ಥವಾದ ಸೇವೆಯನ್ನು ಮತ್ತು ಇವರಿಗಿರುವ ಜ್ಞಾನವನ್ನು ಗುರುತಿಸಿ ಸ್ವರ್ಣವಲ್ಲಿ ಮಠವು ಇವರಿಗೆ ಆಸ್ಥಾನ ವಿದ್ವಾನ್ ಎನ್ನುವ ಬಿರುದಿತ್ತು ಸನ್ಮಾನಿಸಿದೆ.
ಆರ್ಷಕ್ಷೇತ್ರದಲ್ಲಿ ಇವರ ಕೊಡುಗೆಯನ್ನು ಗುರುತಿಸಿ ಶ್ರೀ ಅಖಿಲ ಹವ್ಯಕ ಮಹಾಸಭೆಯು ಸನ್ಮಾನಿಸಿ ಪುರಸ್ಕರಿಸಿದೆ. ಇವರು ಮೂಲತಃ ಮತ್ತಿಘಟ್ಟದವರಾಗಿದ್ದು ಸದ್ಯ ಬೆಂಗಳೂರು ನಗರದಲ್ಲಿ ವಾಸಿಸುತ್ತಿದ್ದು, ಈ ಸನ್ಮಾನಕ್ಕಾಗಿ ಮತ್ತಿಘಟ್ಟ ವೈದಿಕ ಪರಿಷತ್‌ನವರು ಸಂತೋಷ ವ್ಯಕ್ತಪಡಿಸಿದ್ದಾರೆ. ಶ್ರೀಯುತರ ಇಬ್ಬರು ಪುತ್ರರಲ್ಲಿ ಒಬ್ಬರು
ರಾಧಾಕೃಷ್ಣ ಘನಪಾಟಿ ಆಗಿರುತ್ತಾರೆ.