ಶಿರಸಿ: ಶ್ರೀ ಅರುಣೋದಯ ಕಲಾನಿಕೇತನ (ರಿ) ಶಾಸ್ತ್ರೀಯ ಸಂಗೀತ ವಿದ್ಯಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಸಂಗೀತೋತ್ಸವವು ಜ:4 ಶನಿವಾರದಂದು ಇಳಿಹೊತ್ತು 4 ರಿಂದ ಹೊಟೆಲ್ ಸಾಮ್ರಾಟ್‌ನ ವಿನಾಯಕ ಹಾಲ್‌ನಲ್ಲಿ ನಡೆಯಲಿದೆ.
ಶಾಸ್ತ್ರೀಯ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ ವಾದನ ಕಾರ್ಯಕ್ರಮ ನಡೆಯಲಿದ್ದು ಸಭಾ ಕಾರ್ಯಕ್ರಮದ ಉದ್ಘಾಟಕರಾಗಿ ಎಮ್.ಎಮ್. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಉಪಸಮಿತಿ ಅಧ್ಯಕ್ಷ, ಎಸ್.ಕೆ.ಭಾಗ್ವತ್ ಆಗಮಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಶ್ರೀ ಅರುಣೋದಯ ಕಲಾನಿಕೇತನ ಪ್ರಾಚಾರ್ಯ ಪಂ.ಎಸ್.ಯು.ಪೋತದಾರ ವಹಿಸಲಿದ್ದಾರೆ. ಕಾರ್ಯಕ್ರಮ ನಿರೂಪಣೆಯನ್ನು ಜಗದೀಶ ಭಂಡಾರಿ ಮತ್ತು ಶ್ರೀಮತಿ ಸುಧಾ ಆಚಾರ್ಯ ನಿರ್ವಹಿಸಲಿದ್ದಾರೆ.
ಸಂಗೀತ ಕಾರ್ಯಕ್ರಮದಲ್ಲಿ ಪಂ. ವಿನಾಯಕ ಹೆಗಡೆ, ಮುತ್ಮುರ್ಡು, ವಿದುಷಿ ಸಂಗೀತಾ ಹೆಗಡೆ, ಗಿಳಿಗುಂಡಿ, ಧಾರವಾಡ, ಇವರ ಗಾಯನಕ್ಕೆ ಗುರುರಾಜ ಹೆಗಡೆ ಆಡುಕುಳ ತಬಲಾ ಸಾತ್ ಮತ್ತು ಭರತ ಹೆಗಡೆ ಹೆಬ್ಬಲಸು ಹಾರ‍್ಮೋನಿಯಂ ಸಾತ್ ನೀಡಲಿದ್ದಾರೆ ಎಂದು ಕಾರ್ಯಕ್ರಮ ಸಂಘಟಕರು ಮತ್ತು ಪ್ರಾಚಾರ್ಯ ಪಂ. ಸಂಜೀವ ಪೋತದಾರ ತಿಳಿಸಿರುತ್ತಾರೆ.