ಸಿದ್ದಾಪುರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಯ ಅರ್ಜಿಗಳು ಪುನರ್ ಪರಿಶೀಲನಾ ಕಾರ್ಯ ಜರುಗುತ್ತಿರುವ ಹಿನ್ನಲೆಯಲ್ಲಿ ಅರಣ್ಯವಾಸಿಗಳು ಇಂದು, ಡಿ.31 ಮುಂಜಾನೆ 10.30 ಕ್ಕೆ ಸಿದ್ದಾಪುರ ತಾಲೂಕಿನ ತಹಶೀಲ್ದಾರ ಕಛೇರಿಯಲ್ಲಿ ಅರಣ್ಯ ಹಕ್ಕು ಸಮಿತಿಗೆ ಭೇಟಿಯಾಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯವಾಸಿಗಳಿಗೆ ಅರ್ಜಿ ಪರಿಶಿಲನಾ ಸಮಯದಲ್ಲಿ ಖುದ್ದಾಗಿ ಹಾಜರಿದ್ದು ಈಗಾಗಲೇ ಸಲ್ಲಿಸಿರುವ ದಾಖಲಾತಿಗಳನ್ನು ಹೊರತುಪಡಿಸಿ, ಅರಣ್ಯ ಹಕ್ಕು ಕಾಯಿದೆಯ ನಿಯಮನುಸಾರ ಡಿಸೆಂಬರ್ 13, 2005 ಕ್ಕಿಂತಲೂ ಪೂರ್ವ (ಮೂರು ತಲೆಮಾರಿನ ಪೂರ್ವದಿಂದ ಅಂದರೆ 1930) ಪ್ರಧಾನವಾಗಿ ಅರಣ್ಯಗಳಲ್ಲಿ ವಾಸಿಸಿರುವ ಅಥವಾ ವಾಸ್ತವಿಕ ಜೀವನೋಪಾಯದ ಅವಶ್ಯಕತೆಗಳಿಗಾಗಿ ಅರಣ್ಯದ ಅಥವಾ ಅರಣ್ಯ ಜಮೀನಿನ ಮೇಲೆ ಅವಲಂಬಿತವಾಗಿರುವ ಬಗ್ಗೆ ಧೃಡಿಕೃತ ದಾಖಲೆಗಳನ್ನು ಅಥವಾ ಸಾಗುವಳಿ ಅಥವಾ ವಾಸ ಮಾಡುತ್ತಿರುವ ಅರಣ್ಯ ಜಮೀನಿನ ಕಬ್ಜಾ ಹೊಂದಿರುವ ಬಗ್ಗೆ ಸರ್ಕಾರದ ದಂಡ ಅಥವಾ ಆದೇಶ, ನೋಟೀಸ್ ಅಥವಾ ಇನ್ನೀತರೆ ಸರ್ಕಾರ ದಾಖಲೆಗಳನ್ನು ಧೃಡಿಕರಿಸಿ ಹಾಜರಪಡಿಸಬೇಕಾಗಿ ಅರಣ್ಯವಾಸಿಗಳಿಗೆ ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿಯ ಸದಸ್ಯ ಕಾರ್ಯದರ್ಶಿಯಿಂದ ತಿಳುವಳಿಕೆ ಪತ್ರ ರವಾನೆವಾಗುತ್ತಿರುವ ಹಿನ್ನಲೆಯಲ್ಲಿ ಮೇಲಿನ ಭೇಟಿಯ ಕಾರ್ಯಕ್ರಮವನ್ನ ನಿಗದಿಗೊಳಿಸದಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನೋಟೀಸಿನಲ್ಲಿ ಅರಣ್ಯವಾಸಿ ನಿಗದಿಪಡಿಸಿದ ದಿನಾಂಕದಂದು ಹಾಜರಾಗದೇ ಇದ್ದರೆ, ನಿಯಮಾನುಸಾರ ಪ್ರಕರಣದ ಕ್ರಮ ಜರುಗಿಸಲಾಗುದೆಂಬ ಅಂಶ ಉಲ್ಲೇಖೀಸಲ್ಪಟ್ಟಿರುವದರಿಂದ ಅರಣ್ಯ ಹಕ್ಕು ಸಮಿತಿಗೆ ಭೇಟಿಗೆ ನಿರ್ಧರಿಸಲಾಗಿದೆ ಎಂದು ಹಾಗೂ ಆಸಕ್ತರು ಭಾಗವಹಿಸಲು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.