ಸಿದ್ದಾಪುರ: ತಾಲೂಕಿನ ವಾಜಗದ್ದೆಯ ಶ್ರೀದುರ್ಗಾವಿನಾಯಕ ಕೃಷಿಕ ಯುವಕ ಸಂಘದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಜರುಗಿದ ಕಾರ್ತವೀರ್ಯಾರ್ಜುನ ಆಖ್ಯಾನದಲ್ಲಿ ರಾವಣನಾಗಿ ಹಿರಿಯ ಪತ್ರಕರ್ತ ನಾಗರಾಜ ಮತ್ತಿಗಾರ, ಕಾರ್ತವೀರ್ಯನಾಗಿ ಪಾಕ ತಜ್ಞ ಎಂ.ಜಿ.ಭಟ್ ಗಮನ ಸೆಳೆದರು. ಇಬ್ಬರೂ ಯಕ್ಷಗಾನ ಆಸಕ್ತರಾಗಿದ್ದು, ತೀರಾ ಅಪರೂಪಕ್ಕೆ ಪಾತ್ರ ನಿರ್ವಹಿಸಿದ್ದು ವಿಶೇಷವಾಗಿತ್ತು. ಹಿಮ್ಮೇಳದಲ್ಲಿ ನಂದನ ದಂಟಕಲ್, ಮದ್ದಲೆಯಲ್ಲಿ ಗಣೇಶ ಭಟ್ ಮಣಗಾರ, ಚಂಡೆಯಲ್ಲಿ ರಘುಪತಿ ಹೂಡೆಹದ್ದ, ಭಾರ್ಗವ ಹೆಗ್ಗೋಡು ಸಹಕರಿಸಿದರು.