ಶಿರಸಿ: ಸಿಂಗಪುರ ವಿಶ್ವ ಕನ್ನಡ ಹಬ್ಬದಲ್ಲಿ ಹಾಡುವ ಮೂಲಕ ಅಂತರರಾಷ್ಟ್ರೀಯ ಖ್ಯಾತಿಗೆ ಭಾಜನರಾದ ಕದಂಬ ಕಲಾ ವೇದಿಕೆಯ ಖ್ಯಾತ ಗಾಯಕಿ ದಿವ್ಯಾ ಶೇಟ್ಗೆ ಶಿರಸಿಯ ದೈವಜ್ಞ ಸಭಾಭವನದಲ್ಲಿ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ ದೈವಜ್ಞ ಮಹಿಳಾ ಮಂಡಳಿಯವರು ತಮ್ಮ ಸಮಾಜದ ಪ್ರತಿಭೆಗೆ ಸನ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ಅಧ್ಯಕ್ಷೆ ವಿನೋದಾ ಶೇಟ್, ಪ್ರಭಾಕರ್ ವೆರ್ಣೇಕರ್, ಮಂಜುನಾಥ್ ಶೇಟ್, ನಾಗರಾಜ್ ಶೇಟ್, ಪೂಜಾ ಶೇಟ್ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಮತ್ತು ಸೀಮಾ ಲಕ್ಷ್ಮಣ ಶೇಟ್ ದಂಪತಿಗಳು ದೀಕ್ಷಾ ಮತ್ತು ದರ್ಶನ್ ಇದ್ದರು.