Slide
Slide
Slide
previous arrow
next arrow

ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರ: ರೋಹಿಣಿ ನಕ್ಷತ್ರ ೧ನೇ ಪಾದ

300x250 AD

ರುದ್ರೋ ಬಹು ಶಿರಾ ಬಭ್ರುಃ ವಿಶ್ವಯೋನಿಃ ಶುಚಿಶ್ರವಾಃ|ಅಮೃತಃ ಶಾಶ್ವತಃ ಸ್ಥಾಣುಃ ವರಾರೋಹೋ ಮಹಾತಪಾಃ||

ಭಾವಾರ್ಥ: ‘ರುದ್ರಃ’ ಎಂದರೆ ಮರಣ ಅಥವಾ ಪ್ರಳಯ ಕಾಲದಲ್ಲಿ ಜನರನ್ನು ರೋಧಿಸುವಂತೆ ಮಾಡುವವನು.ಭಕ್ತರ ದುಃಖ ಕಾರಣವನ್ನು ಧ್ರುವೀಕರಿಸಿ ಶೋಕವನ್ನೂ ನಿವಾರಣೆ ಮಾಡುತ್ತಾನೆ. ‘ಬಹುಶಿರಾಃ’ ಎಂದರೆ ಬಹಳ ಶಿರಸ್ಸುಗಳಿರುವವನು.’ಬಭ್ರುಃ’ ಎಂದರೆ ಸಮುದ್ರವು ಅಲೆಗಳನ್ನೆಲ್ಲಾ ಧರಿಸಿರುವಂತೆ ಸಮಸ್ತ ಲೋಕಗಳನ್ನು ಧರಿಸಿರುವವವನು.ಅವನ ಸಾನಿಧ್ಯದಲ್ಲಿ ಶರೀರ, ಇಂದ್ರಿಯ, ಮನಸ್ಸು, ಬುದ್ಧಿಗಳು ಕೆಲಸ ಮಾಡುತ್ತವೆ. ಈತನಿಗೆ ಮೃತ್ಯುವು ಎಂದರೆ ಮರಣವು ಇರುವುದಿಲ್ಲ.ಆದ್ದರಿಂದ ಈತನು ‘ಅಮೃತನು’ ಅಜರನು, ಅಮರನು. ಅಚಲನಾಗಿ ಶಾಶ್ವತವಾಗಿರುವದರಿಂದ ‘ಶಾಶ್ವತ ಸ್ತಾಣುಃ:’. ಶುದ್ಧ ಅರಿವಿನ ಸ್ವರೂಪದಲ್ಲಿರುವ ಇವನು ತ್ರಿಕಾಲದಲ್ಲಿಯೂ ಬದಲಾವಣೆ ಹೊಂದದೆ ಇರುತ್ತಾನೆ. ‘ವರ’ ಎಂದರೆ ಶ್ರೇಷ್ಠ. ‘ಆರೋಹ’ ಎಂದರೆ ತೊಡೆ. ಶ್ರೇಷ್ಠವಾದ ತೊಡೆ ಇರುವವನಾಗಿದ್ದರಿಂದ ‘ವರಾರೋಹನು’.ಅಂದರೆ ಅತ್ಯಂತ ಅಮೂಲ್ಯವಾದ ಗಮ್ಯಸ್ಥಾನನು.ಆತ್ಮನಲ್ಲಿ ವಿರಾಜ ಮಾನನಾಗುವಿಕೆಯೇ ಜೀವನದಲ್ಲಿ ಗಳಿಸಬೇಕಾದ ಉನ್ನತವಾದ ಗತಿಯು. ಯಾಕೆಂದರೆ ಪ್ರಕೃತಿ (ಪ್ರಪಂಚ)ಯಲ್ಲಿರುವ ಯಾವುದೇ ಹುಟ್ಟು ಮುಪ್ಪು, ಮರಣ ದೋಷಗಳು ಅಲ್ಲಿಲ್ಲ ಹಾಗೂ ಅಲ್ಲಿಗೆ ಹೋದವರು ಸಂಸಾರಕ್ಕೆ ಹಿಂತಿರುಗುವದಿಲ್ಲ. ಯಾವಾತನಿಗೆ ಜ್ಞಾನಮಯವಾದ ತಪಸ್ಸಿರುವುದೋ ಆತನು ‘ಮಹಾತಪನು’. ತಪಸ್ ಎಂದರೆ ಜ್ಞಾನ,ಐಶ್ವೈರ್ಯ ಮತ್ತು ಪ್ರತಾಪ. ಇವು ಮಹತ್ತಾಗಿ ಈತನಿಗೆ (ಶ್ರೀ ಮಹಾವಿಷ್ಣುವಿಗೆ) ಇರುವದರಿಂದ ‘ಮಹಾತಪನು’.

300x250 AD

(ಸಂ:-ಡಾ. ಚಂದ್ರಶೇಖರ.ಎಲ್ ಭಟ್ ಬಳ್ಳಾರಿ.)

Share This
300x250 AD
300x250 AD
300x250 AD
Back to top